ಬೈಕ್ ಕಳ್ಳನ ಬಂಧನ!

ಕೊಡಗು:ಸೋಮವಾರಪೇಟೆ ಸುತ್ತಾಮುತ್ತ ಬೈಕ್ ಕಳುವು ಮಾಡಿ ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ಪೋಲಿಸರು ಬಂಧಿಸಿದ್ದಾರೆ. ಇಲ್ಲಿನ ಕೂಲಿ ಕಾರ್ಮಿಕ ಸಂಜಯ್ ಕುಮಾರ್ ಎಂಬಾತನನ್ನು ಬಂಧಿಸಿ,ಬಂಧಿತನಿಂದ 2.61 ಲಕ್ಷ ಮೌಲ್ಯದ ಬೈಕ್ ಗಳನ್ನು ವಶಕ್ಕೆ ಪಡೆಯಲಾಗಿದೆ. ಬಂಧಿತ ಈಗಾಗಲೇ 12 ಕಳವು ಪ್ರಕರಣದಲ್ಲಿ ನ್ಯಾಯಾಲಯದ ಶಿಕ್ಷೆಯಲ್ಲಿದ್ದು ಕೆಲವು ದಿನಗಳ ಹಿಂದೆಯಷ್ಟೇ ಬಿಡುಗಡೆಯಾಗಿದ್ದ.