fbpx

ಬೇಡಿಕೆ ಈಡೇರಿಸುವಂತೆ ಮಾವುತರು ಹಾಗು ಕಾವಾಡಿಗರ ಪಟ್ಟು

ಖಾಯಂ ವೇತನಕ್ಕಾಗಿ ಪಟ್ಟು ಹಿಡಿದಿರುವ ಆನೆ ಮಾವುತರು, ಕಾವಾಡಿಗಳು ತಮ್ಮ ಪಟ್ಟನ್ನು ಇನ್ನೂ ಸಡಿಲಿಸದ ಹಿನ್ನಲೆಯಲ್ಲಿ ಅಕ್ಟೋಬರ್ 5ರವರೆಗೆ ಈಡೇರೆದಿದ್ದಲ್ಲಿ ನಾಡ ಹಬ್ಬ ದಸರಾ ಬಹಿಷ್ಕಾರ ಮಾಡುವ ಎಚ್ಚರಿಕೆ ನೀಡಿದ್ದ ಕುಶಾಲನಗರ ತಾಲ್ಲೂಕಿನ ದುಬಾರೆ ಮತ್ತು ವಿರಾಜಪೇಟೆ ತಾಲ್ಲೂಕಿನ ಮತ್ತಿಗೋಡು ಮಾವುತರು ಮತ್ತು ಕಾವಾಡಿಗಳನ್ನು ಕೊಡಗು ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಬಿ.ಎನ್ ಮೂರ್ತಿ ಭೇಟಿ ಮಾಡಿದರು.

ಕಳೆದ 8 ವರ್ಷಗಳಿಂದ ಇಟ್ಟಿರುವ ಬೇಡಿಕೆಯನ್ನು ಕಳೆದ ಭಾರಿ ಇಡಲಾಗಿದ್ದರೂ ಈಡೇರಿಸಲು,ಒಂದು ವೇಳೆ 5 ನೇ ತಾರೀಕಿನ ಒಳಗೆ ಈಡೇರದಿದ್ದಲ್ಲಿ ದಸರಾ ಬಹಿಷ್ಕಾರ ಮಾಡುವುದಾಗಿ ಅಧಿಕಾರಿಗಳ ಮುಂದೆ ಪಟ್ಟು ಹಿಡಿದರು. ಈ ಸಂದರ್ಭ ಹಿರಿಯ ಅಧಿಕಾರಿಗಳಿಗೆ ವರದಿ ಸಲ್ಲಿಸಿ ಆಗಸ್ಟ್ 5 ರ ಒಳಗೆ ಸಮಸ್ಯೆ ಬಗೆ ಹರಿಸುವ ಭರವಸೆ ನೀಡಿದರು.

error: Content is protected !!