ಬೇಟೆ ಸಾಹಿತ್ಯಕ್ಕೆ ಆಹ್ವಾನ

ಸಾಹಿತ್ಯ ಪ್ರಕಾರಗಳಲ್ಲಿ ಬೇಟೆ ಸಾಹಿತ್ಯವೂ ಒಂದು. ಇಂದು ಬೇಟೆ ನಿಷಿದ್ಧವಾಗಿದೆ.

ಕೊಡಗು, ಬೇಟೆಯಲ್ಲಿ ಹುಲಿಬೇಟೆಯವರೆಗೂ ಪ್ರಸಿದ್ಧಿಯಾಗಿತ್ತು. “ಹುಲಿ ಮದುವೆ” ಚರಿತ್ರೆಯಲ್ಲಿ ದಾಖಲಾಗಿ ಹೋದ ವಿಚಾರ. ಬೇಟೆ ಕೊಡಗಿನ ಸಂಸ್ಕೃತಿಯ ಭಾಗವೂ ಆಗಿಹೋದದ್ದು. ಕೊಡಗಿನಲ್ಲಿ “ಕಾಕೆಮಾನಿ” ಬಿ. ಡಿ. ಗಣಪತಿ ಅವರ ಸಹೋದರ ಇವರ “ಬಿಲ್ಲು ಬಾಣ” ಹಾಗು ಬಿ. ಆರ್. ಜೋಯಪ್ಪನವರ “ಯಾರ ಬೇಟೆ ಮತ್ತು ಇತರ ಪ್ರಸಂಗಗಳು” ಎಂಬ ಕೃತಿ ಮಾತ್ರ ದಾಖಲಾದಂತದ್ದು.

ಬೇಟೆಯಲ್ಲಿ ಹತ್ತಾರು ಪ್ರಕಾರಗಳಿವೆ. ಹಾಗೆಯೇ ಕೊಡಗಿನಲ್ಲಿ ಅನೇಕ ಮಾಜಿ ಬೇಟೆಗಾರರು ಇದ್ದಾರೆ. ಅವರಲ್ಲಿ ಬೇಟೆಯ ಸ್ವಾರಸ್ಯಕರ ಘಟನೆಗಳು, ದುರಂತಗಳು ಇತ್ಯಾದಿಗಳು ಬತ್ತಳಿಕೆಯಲ್ಲಿದೆ. ಅವರ ಈ ಬೇಟೆಯ ಅನುಭವದ ನೆನಪುಗಳನ್ನು ಅಕ್ಷರ ರೂಪದಲ್ಲಿ ಇಳಿಸಿ ದಾಖಲಿಸುವುದು ಅಲ್ಲಾರಂಡ ರಂಗಚಾವಡಿಯ ಉದ್ದೇಶ.

ಅದಕ್ಕಾಗಿ, ಬೇಟೆಯ ಅನುಭವಗಳನ್ನು ಸ್ವತಃ ಮಾಜಿ ಬೇಟೆಗಾರರು ಅಥವಾ ಬರಹಗಾರರು ಬೇಟೆಗಾರನ್ನು ಸಂಪರ್ಕಿಸಿ ಅಥವಾ ಬೇಟೆಗಾರರು ಬರಹಗಾರರ ಮೂಲಕ ಬರಹಗಳನ್ನು ರಚಿಸಬಹುದಾಗಿದೆ. ಆಯ್ದ ಬರಹಗಳನ್ನು ಪುಸ್ತಕ ರೂಪದಲ್ಲಿ ಪ್ರಕಟಿಸಲಾಗುವುದು.

ಬರಹಗಳು ಏಪ್ರಿಲ್‌ 20 ರ ಒಳಗಾಗಿ ಕಳುಹಿಸತಕ್ಕದ್ದು.

ಬರಹವನ್ನು ನುಡಿ ತಂತ್ರಾಂಶದಲ್ಲಿ ಅಚ್ಚು ಮಾಡಿ, ಹೆಸರು ಪೂರ್ಣವಿಳಾಸ ಹಾಗೂ ಸಂಪರ್ಕ ಸಂಖ್ಯೆಯೊಂದಿಗೆ vtlcoorg@gmail.com ಗೆ ಇ-ಮೇಲ್‌ ಕಳುಹಿಸುವುದು.

ಪ್ರಥಮ, ದ್ವಿತೀಯ, ತೃತೀಯ ಮತ್ತು ಸಮಾಧಾನಕರ ಬಹುಮಾನಗಳು ಇರುತ್ತವೆ.

ಹೆಚ್ಚಿನ ಮಾಹಿತಿಗೆ, ಮೊಬೈಲ್‌ ಸಂಖ್ಯೆ 9448312310 ಯನ್ನು ಸಂಪರ್ಕಿಸುವುದು. ಅಲ್ಲಾರಂಡ ವಿಠಲ ನಂಜಪ್ಪ ಅಧ್ಯಕ್ಷರು, ಅಲ್ಲಾರಂಡ ರಂಗಚಾವಡಿ ಕರವಲೆ ಬಾಡಗ, ಮಡಿಕೇರಿ

error: Content is protected !!