ಬೇಟೆಗೆ ತೆರಳಿದಾಗ ಗುಂಡೇಟು; ವ್ಯಕ್ತಿ ಬಲಿ

ಕೊಡಗು: ಮಡಿಕೇರಿ ತಾಲ್ಲೂಕು ಮದೆನಾಡಿನಲ್ಲಿ ಕಾಡು ಬೇಟೆಗೆ ವೇಳೆ ವ್ಯಕ್ತಿಯೊಬ್ಬರು ಗುಂಡೇಟಿಗೆ ಬಲಿಯಾದ ಘಟನೆ ನಡೆದಿದೆ.ಇಲ್ಲಿಗೆ ಸಮೀಪದ ನಿವಾಸಿಗಳಾದ
ಕೆ.ಪರಮೇಶ್ವರ್ ಅಲಿಯಾಸ್ ಕಿರಣ್ ಮತ್ತು ಎ. ಬೆಳ್ಯಪ್ಪ ಸತೀಶ್ ಎಂಬವವರು ಕಳೆದ ರಾತ್ರಿ ಬೇಟೆಗೆ ತೆರಳಿದ್ದು ಇಂದು ಬೆಳಗ್ಗೆ ಕಿರಣ್ ಮೃತಪಟ್ಟಿರುವ ವಿಷಯ ತಿಳಿದು ಬಂದಿದೆ.ಆಕಸ್ಮಿಕ ಗುಂಡಿನಿಂದ ಸಾವು ಎಂದು ಸತೀಶ್ ತಿಳಿಸಿದ್ದಾರೆ ಎನ್ನಲಾಗಿದೆ.ಆದರೆ ಗುಂಡು ಹಾರಿರುವುದು ಸತೀಶ್ ಬಂದೂಕಿನಿಂದ ಹಾರಿದ ಗುಂಡಿನಿಂದ ಕಿರಣ್ ಮೃತಪಟ್ಟಿರುವುದು ದೃಡವಾಗಿದೆ.ಇದೊಂದು ಪೂರ್ವ ನಿಯೋಜಿತ ಸಂಚಾಗಿದ್ದು ಕುಟುಂಬದ ಸದಸ್ಯರಿಂದ ಕೊಲೆ ಆರೋಪ ಮಾಡಲಾಗಿದ್ದು, ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣದ ಅಡಿ ಕೇಸ್ ದಾಖಲು ಮಾಡಲಾಗಿದೆ.

error: Content is protected !!