ಬೇಕರಿ ಎದುರು ಶವ ಪತ್ತೆ

ಕೊಡಗು:ಮಡಿಕೇರಿ ನಗರದ ಸ್ವರ್ಣ ಬೇಕರಿಯ ಮುಂಭಾಗ ಅನಾಥವಾಗಿ ಬಿದ್ದ ಶವವವನ್ನು
ವಿಶ್ವಹಿಂದೂಪರಿಷತ್ ಬಜರಂಗದಳದ ಕಾರ್ಯಕರ್ತರು ಪೋಲಿಸರ ಸಹಾಯದೊಂದಿಗೆ ಮೃತದೇಹವನ್ನು ಮಡಿಕೇರಿ ಜಿಲ್ಲಾ ಆಸ್ಪತ್ರೆಯ ಶವಗಾರದಲ್ಲಿ ಇರಿಸಲಾಗಿದೆ.

ಮಡಿಕೇರಿ ಸ್ವರ್ಣ ಬೇಕರಿಯ ಮುಂಭಾಗದ ಮೆಟ್ಟಿಲುಗಳಲ್ಲಿ ಮಲಗಿದ ಸ್ಥಿತಿಯಲ್ಲಿಯೇ ಅಸುನೀಗಿದ್ದ ವ್ಯಕ್ತಿ ಜನಾರ್ಧನ ಎಂದು ತಿಳಿದು ಬಂದಿದ್ದು, ಮೂಲತಃ ಕೊಡಗಿನವರೇ ಆಗಿ ಮಡಿಕೇರಿ ನಗರದ ಸುತ್ತಮುತ್ತ ಕೆಲಸ ಮಾಡಿಕೊಂಡಿದ್ದರು ಅಂತ ಹೇಳಲಾಗುತ್ತಿದೆ. ಸಂಬಂಧಿಕರು ವಾರಸುದಾರರು ಇದ್ದಲ್ಲಿ ಮಡಿಕೇರಿ ನಗರಠಾಣೆಯನ್ನು ಸಂಪರ್ಕಿಸಿಬಹುದು.

error: Content is protected !!