fbpx

ಬೆಳ್ಳಿತೆರೆಯಲ್ಲೂ ಮಿಂಚಲಿರುವ ಪ್ರತಿಭಾನ್ವಿತ ನಟ: ದೇವಯ್ಯ ಕಳಕಂಡ

ಕಿರುತೆರೆ ಧಾರಾವಾಹಿಯಾದ ‘ಜೊತೆ ಜೊತೆಯಲಿ’ ಧಾರಾವಾಹಿಯಲ್ಲಿ ಪ್ರಮುಖ ಪಾತ್ರ ಹರ್ಷವರ್ಧನ್ ಆಗಿ ನಟಿಸಿ ಮನೆ ಮಾತಾದ ಕೊಡಗಿನ ಪ್ರತಿಭಾನ್ವಿತ ನಟ ದೇವಯ್ಯ ಕಳಕಂಡ ಅವರು ಈಗ ಸ್ಯಾಂಡಲ್ ವುಡ್ಡಿನಲ್ಲೂ ಮಿಂಚಲಿದ್ದಾರೆ.

ಹೌದು ನಿರ್ದೇಶಕ ಯೋಗರಾಜ್ ಭಟ್ ಗರಡಿಯಲ್ಲಿ ಪಳಗಿದ ರವೀಂದ್ರ ಅವರು ನಿರ್ದೇಶಿಸುತ್ತಿರುವ ಹೊಸ ಚಿತ್ರದಲ್ಲಿ ನಾಯಕ ನಟನಾಗಿ ದೇವಯ್ಯ ಅವರು ನಟಿಸಲಿದ್ದಾರೆ. ನಟಿಯಾಗಿ ಅರ್ಚನಾ ಕೊಟ್ಟಿಗೆ ಅವರು ಅಭಿನಯಿಸಲಿದ್ದಾರೆ.

ಮೊದಲ ಬಾರಿಗೆ ಚಂದನವನದಲ್ಲಿ ಮಾಡುತ್ತಿರುವ ಈ ಪ್ರಯತ್ನದಲ್ಲಿ ಪೊಲೀಸ್ ಪಾತ್ರವನ್ನು ನಿರ್ವಹಿಸಲಿದ್ದಾರೆ. ಪೊಲೀಸ್ ಕಾಪ್ ಆಗಿ ನಿಗೂಢ ಕೇಸೊಂದನ್ನು ಬಗೆ ಹರಿಸುವ ಚಾಣಾಕ್ಯ ಪಾತ್ರವನ್ನು ನಿಭಾಯಿಸಲಿದ್ದಾರೆ. ಸಿನಿಮಾದ ಜೊತೆಗೆ ಧಾರಾವಾಹಿಯಲ್ಲೂ ನಟನೆಯನ್ನು ಮುಂದುವರೆಸಲಿದ್ದಾರೆ.

error: Content is protected !!