ಬೆಳೆ ಹಾನಿ ನಿಖರ ಸರ್ವೇಗೆ ಜಿಲ್ಲಾಧಿಕಾರಿ ಸೂಚನೆ

ಮಳೆಯ ಪ್ರಮಾಣ ಆಧರಿಸಿ ಬೆಳೆ ಸರ್ವೇ ಮಾಡಬೇಕು. ಇನ್ಪುಟ್ ಸಬ್ಸಿಡಿ ಪರಿಹಾರಗಳು ಒದಗಿಸುವಂತಾಗಬೇಕು ಎಂದು ಜಿಲ್ಲಾಧಿಕಾರಿ ಚಾರುಲತಾ ಸೋಮಾಲ್ ಅವರು ಸೂಚಿಸಿದ್ದಾರೆ.
ಬೆಳೆ ಹಾನಿಗೆ ಸಂಬಂಧಿದಂತೆ ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಅಧಿಕಾರಿಗಳಿಂದ ಮಾಹಿತಿ ಪಡೆದು ಅವರು ಮಾತನಾಡಿದರು.
ತಾಲ್ಲೂಕು ಹಾಗೂ ಜಿ.ಪಂ.ವ್ಯಾಪ್ತಿಗಳಲ್ಲಿ ಬಿದ್ದ ಮಳೆಯನ್ನಾಧರಿಸಿ, ಬೆಳೆ ಹಾನಿ ಸರ್ವೇ ಮಾಡಬೇಕು. ಕಳೆದ ಮೂರು ವರ್ಷಗಳಲ್ಲಿ ಮಾಡಿದ ಸರ್ವೇಗಳಂತೆ ಈ ವರ್ಷವೂ ಸಹ ನಿಖರ ಸರ್ವೇ ಮಾಡುವಂತೆ ಎಂದು ಚಾರುಲತಾ ಸೋಮಾಲ್ ಅವರು ತಿಳಿಸಿದರು.
ಹೋಬಳಿ ಮಟ್ಟದಲ್ಲಿ ಬೆಳೆ ಹಾನಿ ಕುರಿತು ವಿಮರ್ಶೆ ಮಾಡಬೇಕು. ಅಗಸ್ಟ್ ತಿಂಗಳಿನ ವರೆಗಿನ ಪೂರ್ಣಗೊಂಡ ವರದಿಗಳನ್ನು ಸಲ್ಲಿಸಿ, 25 ದಿನಗಳ ಹಿಂದೆ ಬಿದ್ದ ಮಳೆಯನ್ನು ಆದರಿಸಿ ಹಾಗೂ ಅಧಿಕ ಮಳೆ ಬಿದ್ದ ಪ್ರದೇಶಗಳಲ್ಲಿ ಪುನ: ಮರು ಸರ್ವೇ ನಡೆಸಿ ಎಂದು ಜಿಲ್ಲಾಧಿಕಾರಿ ಸೂಚಿಸಿದರು.
ಹೆಚ್ಚು ಮಳೆಯಾದ ಪ್ರದೇಶದಲ್ಲಿ ಬೆಳೆ ಹಾನಿ ದುರಸ್ತಿ ಕುರಿತು ಮಾಹಿತಿ ನೀಡಬೇಕು ಹಾಗೂ ಕ್ಷೇತ್ರ ಭೇಟಿ ಮಾಡಿದ ವರದಿ ಹಾಗೂ ಛಾಯಾಚಿತ್ರ ಸಲ್ಲಿಸಬೇಕು ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಅವರು ನಿರ್ದೇಶನ ನೀಡಿದರು.
2021 ರಲ್ಲಿ ಎಲ್ಲಾ ಗ್ರಾಮಗಳಿಗೂ ಮಾದರಿ ಸರ್ವೇ ಮಾಡಲಾಗಿದೆ. ಈವರೆಗೆ ಶೇ.33 ರಷ್ಟು ಬೆಳೆ ಹಾನಿ ಕಂಡುಬಂದಿಲ್ಲ ಎಂದು ಕಾಫಿ ಮಂಡಳಿಯ ಉಪ ನಿರ್ದೇಶಕರಾದ ಶಿವಕುಮಾರ್ ಅವರು ತಿಳಿಸಿದರು.
ಮಳೆ ಹೆಚ್ಚಾದಲ್ಲಿ ಕಾಫಿ ಬೆಳೆ ಉದುರುವ (ಡ್ರಾಪಿಂಗ್) ಸಾಧ್ಯತೆ ಇರುತ್ತದೆ. ಈ ಕುರಿತು ಹೆಚ್ಚು ಗಮನ ಹರಿಸಲಾಗಿದೆ ಎಂದು ತೋಟಗಾರಿಕೆ ಇಲಾಖೆ ಉಪ ನಿರ್ದೇಶಕರಾದ ಶಶಿಧರ್ ಅವರು ಹೇಳಿದರು.
ಸಭೆಯಲ್ಲಿ ಜಿ.ಪಂ.ಸಿಇಒ ಭನ್ವರ್ ಸಿಂಗ್ ಮೀನಾ, ಮಡಿಕೇರಿ ತಾಲ್ಲೂಕು ತಹಶೀಲ್ದಾರರಾದ ಮಹೇಶ್, ಗೋವಿಂದರಾಜು ಇತರರು ಹಾಜರಿದ್ದರು.