fbpx

ಬೆಂಗಳೂರು ಮಂಗಳೂರಿಗೆ ಸುರಂಗ ಮಾರ್ಗ


ಮಂಗಳೂರು: ಕೇಂದ್ರ ಸರ್ಕಾರದಿಂದ ದೇಶದ ವಿವಿದೆಡೆ ನಿರ್ಮಾಣ ಮಾಡುತ್ತಿರುವ ರಾಷ್ಟ್ರೀಯ ಹೆದ್ದಾರಿ ಇದೀಗ ಬೆಂಗಳೂರಿಂದ ಮಂಗಳೂರು ನಡುವಿನ ಶಿರಡಿ ಘಾಟ್ ಮೂಲಕ ನಿರ್ಮಾಣ ಮಾಡಲು ಕೇಂದ್ರ ಸರ್ಕಾರ ನಿರ್ಧಾರ ಮಾಡಿದೆ. 10 ಸಾವಿರ ಕೋಟಿ ವೆಚ್ಚದಲ್ಲಿ ಈ ಕಡಿದಾದ ರಸ್ತೆಯ ಮಾರ್ಗದಲ್ಲಿ ನಿರ್ಮಾಣವಾಗಲಿದ್ದು,ಬೆಂಗಳೂರು ಮಂಗಳೂರು ನಡುವೆ ಎಕ್ಸ್ ಪ್ರೆಸ್ ವೇ ಆಗಲಿದೆ. ಮಾರ್ಗ ಪೂರ್ಣಗೊಂಡ ಬಳಿಕ ಕೇವಲ 5 ಗಂಟೆಗಳಲ್ಲಿ ಬೆಂಗಳೂರು ಮಂಗಳೂರಿಗೆ ತೆರಳಬಹುದಾಗಿದೆ ಎಂದು ಕೇಂದ್ರ ಸಚಿವ ಡಿ.ವಿ ಸದಾನಂದ ಗೌಡ ತಿಳಿಸಿದ್ದಾರೆ.

error: Content is protected !!