ಬೆಂಗಳೂರು: ದುಬೈ ಪ್ರಯಾಣಿಕನಿಂದ ಚಿನ್ನ ವಶಕ್ಕೆ ಪಡೆದ ಅಧಿಕಾರಿಗಳು!

ಬೆಂಗಳೂರು: ದುಬೈನಿಂದ ಫ್ಲೈ ದುಬೈ ವಿಮಾನದ ಮೂಲಕ ನಗರಕ್ಕೆ ಆಗಮಿಸಿದ್ದ ಪ್ರಯಾಣಿಕನೋರ್ವನಿಂದ ವಾಯು ಗುಪ್ತಚರ ಘಟಕ (ಎಐಯು)ದ ಅಧಿಕಾರಿಗಳು 1 ಕೆಜಿ

ಚಿನ್ನವನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಬಂಧಿತ ವ್ಯಕ್ತಿಯನ್ನು ಕೊಡಗು ಜಿಲ್ಲೆಯ ವಿರಾಜಪೇಟೆಯ 34 ವರ್ಷದ ನಿವಾಸಿಯೆಂದು ಹೇಳಲಾಗುತ್ತಿದೆ. ಪ್ಲಾಸ್ಟಿಕ್ ಕವರ್ ನಲ್ಲಿ ಒಳ ಉಡುಪಿನಲ್ಲಿ ವ್ಯಕ್ತಿ ಚಿನ್ನವನ್ನು ಸಾಗಿಸುತ್ತಿದ್ದ. ಚಿನ್ನ ಮೊತ್ತ ರೂ.53 ಲಕ್ಷ ಎಂದು ಅಂದಾಜಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಬಂಧಿತ ವ್ಯಕ್ತಿ ಫ್ಲೈ ದುಬೈ ಏರ್ಲೈನ್ಸ್ ನಿಂದ ಎಫ್’ಢೆಡ್ 4007 ಸಂಖ್ಯೆಯ ವಿಮಾನದ ಮೂಲಕ ಕನಿನ್ನೆ ಮಧ್ಯಾಹ್ನ 3.07ರ ಸುಮಾರಿಗೆ ಕೆಂಪೇಗೌಡ ಅಂತರಾಷ್ಟ್ರೀ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದಾನೆ.

ಆತನ ನಡವಳಿಕೆಗಳನ್ನು ಗಮನಿಸಿದ ಅಧಿಕಾರಿಗಳು ತೀವ್ರ ತಪಾಸಣೆಗೊಳಪಡಿಸಲಿದ್ದಾರೆ. ಈ ವೇಳೆ ಒಳ ಉಡುಪಿನಲ್ಲಿ 1.024 ಗ್ರಾಮಗಳಷ್ಟು ಚಿನ್ನ ಇರುವುದು ಕಂಡು ಬಂದಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

error: Content is protected !!