ಬೆಂಗಳೂರಿನಲ್ಲಿ ಅಂಗಡಿ ತೆರೆಯಲಿದ್ದಾನೆ ಬ್ಯಾಟ್ ಮ್ಯಾನ್!

ಬೆಂಗಳೂರು: ಸಚಿನ್ ತೆಂಡೂಲ್ಕರ್, ಸೌರವ್ ಗಂಗೂಲಿ, ಮಹೇಂದ್ರ ಸಿಂಗ್ ಧೋನಿ ಮತ್ತು ರಾಹಲ್ ದ್ರಾವಿಡ್ ಅವರು ಸೇರಿದಂತೆ ಹಲವು ಕ್ರಿಕೆಟ್ ದಿಗ್ಗಜರಿಗೆ ಬ್ಯಾಟ್ ಸಿದ್ಧಪಡಿಸುತ್ತಿದ್ದ ಭಾರತದ ಬ್ಯಾಟ್ ಡಾಕ್ಟರ್ ಎಂದೇ ಖ್ಯಾತಿ ಪಡೆದಿದ್ದ ರಾಮ್ ಭಾಂಡಾರಿ ಅವರು ಈಗ ಬೆಂಗಳೂರಿನ ಉತ್ತರಹಳ್ಳಿಯಲ್ಲಿ ಸ್ಪೋರ್ಟ್ಸ್ ಶಾಪ್ ಆರಂಭಿಸಲು ಮುಂದಾಗಿದ್ದಾರೆ.

ಈ ಹಿಂದೆ ಕಸದ ಟ್ರಕ್ ಚಾಲಕ, ಬೌನ್ಸರ್ ಮತ್ತು ಕಾರ್ಪೆಂಟರ್ ಆಗಿ ಕೆಲಸ ಮಾಡುತ್ತಿದ್ದ ಭಂಡಾರಿ ಅವರು ಈಗ ಅದೇ ಉತ್ಸಾಹದಲ್ಲಿ ಹೊಸ ಜವಾಬ್ದಾರಿ ವಹಿಸಿಕೊಳ್ಳಲು ಸಜ್ಜಾಗಿದ್ದಾರೆ. ಭಂಡಾರಿ ಅವರು ಕ್ರಿಕೆಟ್ ಉಪಕರಣಗಳನ್ನು ಮಾತ್ರ ಮಾರಾಟ ಮಾಡಲು ಕ್ರೀಡಾ ಅಂಗಡಿಯೊಂದನ್ನು ತೆರೆಯುತ್ತಿದ್ದಾರೆ.

‘ನನ್ನ ವರ್ಕ್ ಶಾಪ್ ನಲ್ಲಿ ಬ್ಯಾಟ್ ಗಳನ್ನು ಸರಿಪಡಿಸಲು ಯಾವುದೇ ಸುಧಾರಿತ ಯಂತ್ರೋಪಕರಣಗಳು ಅಥವಾ ತಂತ್ರಜ್ಞಾನವಿಲ್ಲ.

ನಾನು ಈಗಾಗಲೇ ಹೊಂದಿರುವ ಸಾಧನಗಳೊಂದಿಗೆ ಕೆಲಸ ಮಾಡುತ್ತೇನೆ. ಇದು ನಾನು ನನ್ನ ಹೃದಯದಿಂದ ಮಾಡುವ ಕೆಲಸ’ ಎಂದು ಭಂಡಾರಿ ಹೇಳಿದ್ದಾರೆ.

ಉತ್ತರಹಳ್ಳಿಯಲ್ಲಿರುವ ತನ್ನ ಸಣ್ಣ ಗ್ಯಾರೇಜ್‌ನಲ್ಲಿ ಅಂಡರ್ -14, 19 ಮತ್ತು 23 ವರ್ಷದೊಳಗಿನವರ ರಾಜ್ಯ ಕ್ರಿಕೆಟ್ ಆಟಗಾರರಿಗಾಗಿ 50ಕ್ಕೂ ಹೆಚ್ಚು ಬ್ಯಾಟ್ ಗಳನ್ನು ರಿಪೇರಿ ಮಾಡುವಲ್ಲಿ ಅವರು ನಿರತರಾಗಿದ್ದಾರೆ. “ಸಣ್ಣ-ಸಮಯದ ಆಟಗಾರರು ತಮ್ಮ ಬ್ಯಾಟ್‌ನಲ್ಲಿ ಉತ್ತಮ ಹಿಡಿತ ಸಾಧಿಸಲು ಸಹಾಯ ಮಾಡುವುದು ನನ್ನ ಉದ್ದೇಶ. ಅವರ ಬಾಡಿ ಲಾಂಗ್ವೇಜ್‌ಗೆ ಸರಿಹೊಂದುವಂತೆ ಅವರ ಬ್ಯಾಟ್ ಅನ್ನು ಮಾರ್ಪಡಿಸುವ ಮೂಲಕ ನಾನು ಅವರಿಗೆ ಸಹಾಯ ಮಾಡುವುದನ್ನು ಮುಂದುವರಿಸುತ್ತೇನೆ’ ಎಂದು ಭಂಡಾರಿ ತಿಳಿಸಿದ್ದಾರೆ.

ಭಂಡಾರಿ ಅವರು ವಿರಾಟ್ ಕೊಹ್ಲಿ, ಹಾರ್ದಿಕ್ ಪಾಂಡ್ಯ, ರೋಹಿತ್ ಶರ್ಮಾ, ಕೆಎಲ್. ರಾಹುಲ್ ಅವರಿಗೆ ಬ್ಯಾಟ್‌ ತಯಾರಿಸಿಕೊಟ್ಟು ಸೈ ಎನಿಸಿಕೊಂಡಿದ್ದಾರೆ. ಭಂಡಾರಿ. ಕನ್ನಡದಲ್ಲಿ ಸ್ಪಷ್ಟವಾಗಿ ಮಾತನಾಡುವ ಅವರು ಮೂಲತಃ ಬಿಹಾರದವರು. 1999-2000ರಲ್ಲಿ ಬೆಂಗಳೂರಿಗೆ ಕೆಲಸಕ್ಕಾಗಿ ಬಂದವರು.

error: Content is protected !!