fbpx

ಬೃಹತ್ ಲಸಿಕಾ ಅಭಿಯಾನಕ್ಕೆ ನಿಟ್ಟೂರು ಗ್ರಾಮದಲ್ಲಿ ಚಾಲನೆ

ಕರ್ನಾಟಕ ರಾಜ್ಯ ಸರ್ಕಾರದ ಬೃಹತ್ ಲಸಿಕಾ ಅಭಿಯಾನಕ್ಕೆ ನಿಟ್ಟೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ತಟ್ಟಕೆರೆ ಹಾಡಿಯಲ್ಲಿ ಅಧ್ಯಕ್ಷರು, ಉಪಾಧ್ಯಕ್ಷ ರು, ಸದಸ್ಯರು ಹಾಡಿಯ ಮನೆ ಮನೆಗಳಿಗೆ ತೆರಳಿ ಲಸಿಕೆಯ ಬಗ್ಗೆ ಅರಿವು ಮೂಡಿಸುವ ಕಾರ್ಯ ನಡೆಸಿದರು.

ನಂತರ ಲಸಿಕಾ ಅಭಿಯಾನ ಕ್ಕೆ ಅಧ್ಯಕ್ಷ ರಾದ ಚಕ್ಕೇರ ಅಯ್ಯಪ್ಪ ನವರು ಚಾಲನೆ ನೀಡಿ ಕೊಡಗು ಜಿಲ್ಲೆಯಲ್ಲಿ ಇಂದು 30ಸಾವಿರ ವ್ಯಕ್ಸನ್ ನೀಡುವ ಗುರಿ ಹೊಂದಿದ್ದು ನಮ್ಮ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲೂ ಎಲ್ಲಾರೂ ಲಸಿಕೆ ಪಡೆದು ನಮ್ಮ ಗ್ರಾಮ ಲಸಿಕೆ ಪಡೆಯುವುದರಲ್ಲಿ ನೂರರಷ್ಟು ಗುರಿ ಸಾಧಿಸಲು ಸರ್ವರ ಸಹಕಾರ ಕೊರಿದರು ಗ್ರಾಮ ಪಂಚಾಯಿತಿ ಸದಸ್ಯರಾದ ಕಾಟಿಮಾಡ ಶರೀನ್ ಮಾತನಾಡಿ ಕೇಂದ್ರ ಸರ್ಕಾರ ಉಚಿತ ವಾಗಿ ಜನರ ಜೇವರಕ್ಷಣೆಗಾಗಿ ನೀಡುವ ವ್ಯಕ್ಸನ್ ಪಡೆದು ಕೊಂಡು ದೇಶದ ಅರೋಗ್ಯ ಸುರಕ್ಷೆಯ ದೃಷ್ಟಿಯಲ್ಲಿ ಪಾಲ್ಗೊಂಡು ಸಹಕರಿಸಿಲು ಕರೆ ನೀಡಿದರು. ಪಂಚಾಯಿತಿ ಉಪಾಧ್ಯಕ್ಷೆ ಪಡಿಞರಂಡ ಕವಿತಾ ಅರಂಬದಲ್ಲಿ ಗಿರಿಜನರು ಕೊವಿಡ್ ಲಸಿಕೆ ಪಡೆಲು ಉತ್ಸಾಹ ತೋರಿಸು ತ್ತಿರಲಿಲ್ಲ ಇಗ ವ್ಯಕ್ಸನ್ ಪಡೆಯಲು ಅಸಕ್ತಿ ತೊರಿಸಿ ಗ್ರಾಮ ಪಂಚಾಯಿತಿ ಮನವಿಗೆ ಸ್ಪಂದಿಸುತ್ತಿರುವುದು ಸರ್ಕಾರ ದ ಯೋಜನೆಗಳನ್ನು ಹಾಡಿಯ ಜನರ ಮನೆಗೆ ಮುಟ್ಟಿಸಲು ಪಂಚಾಯಿತಿ ಅಡಳಿತ ಮಂಡಳಿಯ ಉತ್ಸಾಹವನ್ನು ಹಿಮ್ಮಡಿಗೊಳಿಸಿದೆಯೆಂದು ಅಬೃಿಪ್ರಯ ಪಟ್ಟು ತಾವು ಸ್ವತಹ ಹಾಡಿ ಜನರೊಂದಿಗೆ ವ್ಯಕ್ಸನ್ ಪಡೆದು ಗಿರಿಜನರಿಗೆ ವ್ಯಾಕ್ಸನ್ ಪಡೆಯಲು ಧೈರ್ಯ ತುಂಬಿದರು. ಗ್ರಾಮ ಪಂಚಾಯಿತಿ ಸದಸ್ಯರಾದ ಜೇನುಕುರುಬರ ಸಾಸು, ಬಾಳೆಲೆ ಪ್ರಥಮಿಕ ಅರೋಗ್ಯ ಕೇಂದ್ರ ಅರೋಗ್ಯ ಪರಿವೀಕ್ಷರಾದ ತೇಜಸ್ ಗೌಡ, ಪ್ರಮುಖರಾದ ಯಂ ಸಂತೋಷ, ಸತೀಶ್, ಗಿರಿಜನ ಮುಖಂಡರಾದ ಜೇನುಕುರುಬರ ಕೆಂಪ, ಮಾಜಿ ಗ್ರಾಮ ಪಂಚಾಯಿತಿ ಸದಸ್ಯರಾದ ಜೇನುಕುರುಬರ ಅಪ್ಪಣ್ಣ, ಯರವರ ಕಾಳ, ಗೋಪಾಲಿ, ಹಾಡಿಯ ಜನರು ಅರೋಗ್ಯ ಇಲಾಖೆಯ ಕಾರ್ಯಕರ್ತರು, ಅಶಾ ಕಾರ್ಯಕರ್ತೆಯರು ಹಾಜರಿದ್ದರು.

error: Content is protected !!