ಬೃಹತ್ ಗಾತ್ರದ ಹೆಬ್ಬಾವು ರಕ್ಷಣೆ

ಕುಶಾಲನಗರ ತಾಲ್ಲೂಕಿನ ಬಸವನಹಳ್ಳಿಯಲ್ಲಿ ಕೋಳಿಬೈಲು ಉದಯ ಅವರ ಮನೆಯಲ್ಲಿ ಬೃಹತ್ ಗಾತ್ರದ ಹೆಬ್ಬಾವುವೊಂದು ಪ್ರತ್ಯಕ್ಷವಾಗಿದೆ.ಮಳೆಯಿಂದಾಗಿ ಕೊಚ್ಚಿಕೊಂಡು ಬಂದಿರುವ ಹಾವು ಎಂದು ಅಂದಾಜಿಸಲಾಗಿದೆ.ಹೆಬ್ಬಾವು ಅಂದಾಜು ಆರುವರೆ ಉದ್ದವಿದ್ದು ರೇಂಜರ್ ಅನಿಲ್ ಡಿಸೋಜ ಮಾರ್ಗದರ್ಶನ ಮೇರೆಗೆ ಸುಂಟಿಕೊಪ್ಪದ ಸ್ನೇಕ್ ಸಾಜಿ ಹಾವನ್ನು ಸುರಕ್ಷಿತವಾಗಿ ರಕ್ಷಣೆ ಮಾಡಿ ಅತ್ತೂರಿನ ಅರಣ್ಯ ಪ್ರದೇಶಕ್ಕೆ ಬಿಡಲಾಯಿತು.