ಬೃಹತ್ ಗಾತ್ರದ ಹೆಬ್ಬಾವು ಪ್ರತ್ಯಕ್ಷ!

ಸಿದ್ದಾಪುರ-ಪಿರಿಯಾಪಟ್ಟಣದ ಮಾರ್ಗ ಮಧ್ಯ ಸಿಗುವ ಮಾಲ್ದಾರೆ ಮೀಸಲು ಅರಣ್ಯದ ನಡುವಿನ ರಸ್ತೆಯಲ್ಲಿ ಬೃಹತ್ ಗಾತ್ರದ ಹೆಬ್ಬಾವು ಪ್ರತ್ಯಕ್ಷವಾಗಿ ಅಚ್ಚರಿ ಮೂಡಿಸಿದೆ.

ಸರಿ ಸುಮಾರು 12-15 ಅಡಿ ಉದ್ದದ ಈ ಹೆಬ್ಬಾವು ರಸ್ತೆಯನ್ನು ದಾಟುವ ಯತ್ನ ನಡೆಸುತ್ತಿತ್ತು, ಸಾಮಾನ್ಯವಾಗಿ ಡಾಂಬಾರು ರಸ್ತೆಯಲ್ಲಿ ಹಾವುಗಳಿಗೆ ವೇಗವಾಗಿ ತೆರಳಲು ಸಾಧ್ಯವಿಲ್ಲ, ಅಂತಹದರಲ್ಲಿ ಗಾತ್ರದಲ್ಲಿ ದೊಡ್ಡದಾಗಿದ್ದ ಈ ಹಾವು ವಾಹನದ ಸಂಚಾರ ಗಮನಿಸಿ ದಾಟುವ ಪ್ರಯತ್ನ ಮಾಡಿದಂತಿದ್ದು, ಬಳಿಕ ರಸ್ತೆ ದಾಟಲಾಗದೆ ಮತ್ತೆ ಕಾಡಿಗೆ ವಾಪಸ್ಸಾಗಿದೆ.

ಅದೃಷ್ಟವಷಾತ್ ರಸ್ತೆ ಮಧ್ಯೆ ಬಂದು ಯಾವುದಾದಾದರು ವಾಹನ ಹತ್ತಿದ್ದರೆ ಜೀವವನ್ನೇ ಕಳೆದುಕೊಳ್ಳುವ ಸಂಭವವಿತ್ತು, ಅದರಂತೆ ದ್ವಿಚಕ್ರ ವಾಹನಗಳಾಗಿದ್ದರೆ ಅಪಘಾತವೇ ಸಂಭವಿಸುತ್ತಿತ್ತು,ಆಗಿಂದಾಗೆ ಕಾಡಾನೆಗಳ ದರ್ಶನ ಕಾಣುವ ಈ ಪ್ರದೇಶದಲ್ಲಿ ಹೆಬ್ಬಾವು ಗೋಚರಿಸಿ, ವಾಹನ ಸವಾರರ ಸಮಯ ಪ್ರಜ್ಞೆಯಿಂದ ಅಮಾಯಕ ಜೀವಿಯ ಪ್ರಾಣ ಉಳಿದಂತಾಗಿದೆ.

error: Content is protected !!