fbpx

ಬೃಹತ್ ಆಗಿ ನಡೆದ ಯಶಸ್ವಿ ಪ್ರತಿಭಟನೆ

ಸೈನಿಕ ಕುಟುಂಬದ ಮೇಲೆ ನಡೆದಿರುವ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ದೂರು ದಾಖಲಾದ ಸೆಕ್ಷನ್‌ಗಳಡಿ ತನಿಖೆ ಮುಂದುವರೆದಿದ್ದು, ಈಗಾಗಲೇ ಐದು ಮಂದಿಯನ್ನು ಬಂಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕ್ಷಮಾ ಮಿಶ್ರಾ ತಿಳಿಸಿದ್ದಾರೆ.

ನಗರದ ಜನರಲ್ ತಿಮ್ಮಯ್ಯ ವೃತ್ತದಲ್ಲಿ ಪ್ರತಿಭಟನಾಕಾರರಿಂದ ಮನವಿ ಪತ್ರ ಸ್ವೀಕರಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಪ್ರಗತಿಯಲ್ಲಿದೆ. ಆರೋಪಿಗಳ ವಿರುದ್ಧ ‘ರೌಡಿ ಶೀಟ್ ಓಪನ್ ಮಾಡ್ತಾ ಇದ್ದೀವಿ’ ಎಂದು ಸ್ಪಷ್ಟಪಡಿಸಿದರು.
ತನಿಖೆ ನ್ಯಾಯೋಚಿತವಾಗಿ ನಡೆಯಲಿದೆ. ಜಾಮೀನು ನೀಡುವ ಕುರಿತು ನ್ಯಾಯಾಲಯ ನಿರ್ಧರಿಸುತ್ತದೆ. ಚಿನ್ನಾಭರಣ ಕಸಿದುಕೊಂಡಿರುವ ಬಗ್ಗೆ ದೂರಿನಲ್ಲಿ ತಿಳಿಸಲಾಗಿದ್ದು, ಈ ಬಗ್ಗೆಯೂ ತನಿಖೆ ನಡೆಯುತ್ತಿದೆ ಎಂದು ಎಸ್‌ಪಿ ಸ್ಪಷ್ಟಪಡಿಸಿದರು.

ನಿನ್ನೆ ಸಂಜೆ ಸುಮಾರು ನಾಲ್ಕು ಗಂಟೆಗೆ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಪೊಲೀಸ್ ಆಯುಕ್ತರಾದ ಕ್ಷಮಾ ಮಿಶ್ರಾ ಹಾಗು ಜಿಲ್ಲಾಧಿಕಾರಿಗಳಾದ ಚಾರುಲತಾ ಸೋಮಲ್ ಅವರುಗಳು ಪ್ರತಿಭಟನಾ ನಿರತರ ಆಗ್ರಹವನ್ನು ಆಲಿಸಿದರು. ಬೇಡಿಕೆಗಳನ್ನು ಈಡೇರಿಸುವಂತೆ ಗಡುವು ನೀಡಿ ಪ್ರತಿಭಟನೆಯನ್ನು ಹಿಂಪಡೆಯಲಾಯಿತು.

error: Content is protected !!