ಬುಮ್ರಾ- ಅನುಪಮಾ ವಿವಾಹಕ್ಕೆ ಸಿದ್ಧತೆ!?

ಮುಂಬೈ: ಬುಮ್ರಾ-ಅನುಪಮಾ ಕಳೆದ ಕೆಲವು ಸಮಯದಿಂದ ಡೇಟಿಂಗ್ ನಡೆಸುತ್ತಿದ್ದಾರೆಂಬ ಸುದ್ದಿ ಹರಿದಾಡುತ್ತಿತ್ತು. ಇದೀಗ ಈ ವಾರವೇ ಈ ಜೋಡಿ ಗುಜರಾತ್ ಅಥವಾ ಗೋವಾದಲ್ಲಿ ಮದುವೆಯಾಗಲಿದ್ದಾರೆ ಎಂಬ ಸುದ್ದಿ ಕೇಳಿಬರುತ್ತಿದೆ. ಆದರೆ ಇಬ್ಬರೂ ಈ ಬಗ್ಗೆ ಅಧಿಕೃತ ಮಾಹಿತಿ ನೀಡಿಲ್ಲ.

ಟೀಂ ಇಂಡಿಯಾ ಕ್ರಿಕೆಟಿಗ ಜಸ್ಪ್ರೀತ್ ಬುಮ್ರಾ ಮತ್ತು ನಟಿ ಅನುಪಮಾ ಪರಮೇಶ್ವರನ್ ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರೆಯೇ? ಹೀಗೊಂದು ಸುದ್ದಿ ಹರಿದಾಡುತ್ತಿದೆ.

ಬುಮ್ರಾ ಇಂಗ್ಲೆಂಡ್ ಸರಣಿಯ ಅಂತಿಮ ಪಂದ್ಯದ ವೇಳೆ ವೈಯಕ್ತಿಕ ಕಾರಣ ನೀಡಿ ತಂಡದಿಂದ ಬ್ರೇಕ್ ಪಡೆದಿದ್ದರು. ಅವರು ಈ ವಾರ ಅನುಪಮಾ ಜೊತೆ ಸಪ್ತಪದಿ ತುಳಿಯಲಿದ್ದಾರೆ. ಆ ಕಾರಣಕ್ಕೇ ಬ್ರೇಕ್ ತೆಗೆದುಕೊಂಡಿದ್ದಾರೆಂಬ ಸುದ್ದಿ ಹರಿದಾಡುತ್ತಿದೆ.

ಇತ್ತ ಅನುಪಮಾ ಕೂಡಾ ಮೊನ್ನೆಯಷ್ಟೇ ಕೆಲವು ದಿನ ರಜೆಯಲ್ಲಿರುವುದಾಗಿ ಹೇಳಿಕೊಂಡಿದ್ದಾರೆ.ಇದಕ್ಕೆ ಕಾರಣವೇನೆಂದು ನಮಗೆ ಗೊತ್ತು ಎಂದು ಅವರ ಸ್ನೇಹಿತರು ಕಾಮೆಂಟ್ ಕೂಡಾ ಮಾಡಿದ್ದಾರೆ. ಹೀಗಾಗಿ ಅವರು ಮದುವೆಯಾಗುತ್ತಿದ್ದಾರೆಂಬ ಸುದ್ದಿಗೆ ಮತ್ತಷ್ಟು ಬಲ ಬಂದಿದೆ.

error: Content is protected !!