ಬೀಟೆ ಮರ ಸಾಗಾಟ,ಓರ್ವನ ಬಂಧನ

ಕೊಡಗು: ಜಿಲ್ಲೆಯ ಕರಡ ಗ್ರಾಮದ ಕಾಫಿ ತೋಟವೊಂದರಿಂದ ಬೀಟೆ ಮರಗಳು ಕುಯ್ದು ಕೇರಳದ ಕೊಚ್ಚಿನ್ ಗೆ ಸಾಗಾಟ ಮಾಡಲು ಯತ್ನಿಸುತ್ತಿದ್ದ ವೇಳೆ ಮಾಲು ಸಮೇತ ವ್ಯಕ್ತಿಯೊಬ್ಬನನ್ನು ವಿರಾಜಪೇಟೆ ಪೋಲಿಸರು ಬಂಧಿಸಿದ್ದಾರೆ.
ಕೇರಳದ ಮಲ್ಲಪರಂಬು ಜಿಲ್ಲೆಯ ಕೆರುವಾಯಿ ನಿವಾಸಿ ಅನಾಸ್ ಬಂಧಿತ,ಆರೋಪಿಯಾಗಿದ್ದು ಕೃತ್ಯಕ್ಕೆ ಬಳಸಿದ್ದ ಪಿಕಪ್ ವಾಹನ ಸೇರಿದಂತೆ 2 ಲಕ್ಷ ಮೌಲ್ಯದ 5 ಬೀಟೆ ಮರದ ನಾಟಾ ವಶಕ್ಕೆ ಪಡೆಯಲಾಗಿದೆ.ನಾಪೋಕ್ಲು ಸಮೀಪದ ಕೊಳಕೇರಿ ನಿವಾಸಿ ಎಂಬಾತನೊಂದಿಗ8 ಸೇರಿ ಈ ಕೃತ್ಯ ನಡೆಸಿದ್ದು,ತಲೆಮರೆಸಿಕೊಂಡ ಅಪ್ಪುವಿನ ಶೋಧಕಾರ್ಯ ನಡೆಸಲಾಗುತ್ತಿದೆ.