fbpx

ಬೀಟೆ ಮರ ಸಾಗಟ ಯತ್ನ : ಮಾಲು ಸಮೇತ ಮೂರು ವಾಹನಗಳ ವಶ

ಕೃಪೆ- ಮಂಜು ಪೂಜಾರಿ

ಕೊಡಗು(ಸುಂಟಿಕೊಪ್ಪ):ಕಾಫಿ ತೋಟವೊಂದರಲ್ಲಿ ಬೀಟೆ ಮರವನ್ನು ತುಂಡರಿಸಿ ನಾಟಗಳಾಗಿ ಪರಿವರ್ತಿಸಿ ಸಾಗಿಸಲು ಯತ್ನಿಸುತ್ತಿದ್ದ ಪ್ರಕರಣವನ್ನು ಭೇದಿಸಿರುವ ಅರಣ್ಯ ಇಲಾಖೆಯವರು, ಮಾಲು ಸಮೇತ ಮೂರು ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ. ಕುಶಾಲನಗರ ಕೆ.ಜಿ.ಎಸ್. ಸಾಮಿಲ್ ನ ಮಾಲೀಕ ಅಬ್ದುಲ್ ಖಾದರ್ ಎಂಬುವವರ ಮಗ ಹೆಚ್.ಕೆ. ಸುಮೇರ್ ಎಂಬಾತ ಇತರೆ 6 ಜನರೊಂದಿಗೆ ತಾ. 14ರ ಬೆಳಗಿನ ಜಾವ ಸುಂಟಿಕೊಪ್ಪ ಸಮೀಪದ ಕೊಡಗರಹಳ್ಳಿಯ ದೀಪಕ್ ಎಂಬುವವರ ತೋಟದಲ್ಲಿ ಮಳೆ ಗಾಳಿಗೆ ಬಿದ್ದಿದ್ದ ಬೀಟೆ ಮರವನ್ನು ಕಡಿದು ತುಂಡರಿಸಿ 14 ನಾಟಾಗಳಾಗಿ ಪರಿವರ್ತಿಸಿ ಟಿಪ್ಪರ್ ( ಕೆ.ಎ.17 ಬಿ 8090) ವಾಹನದಲ್ಲಿ ತುಂಬಿಸಿಕೊಂಡು ಸಾಗಿಸಲು ಯತ್ನಿಸಿದ್ದಾರೆ. ಇದರ ಸುಳಿವರಿತ ತೋಟದ ಮಾಲೀಕರು ನೀಡಿದ ಮಾಹಿತಿ ಮೇರೆಗೆ ಮಡಿಕೇರಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಪ್ರಭಾಕರನ್ ರವರ ಮಾರ್ಗದರ್ಶನದಲ್ಲಿ ಸೋಮವಾರಪೇಟೆ ಎ.ಸಿ.ಎಫ್. ನೆಹರು, ವಲಯ ಅರಣ್ಯಾಧಿಕಾರಿ ಅನನ್ಯ ಕುಮಾರ್ ರವರ ಸೂಚನೆಯಂತೆ ಆನೆಕಾಡು ಶಾಖೆಯ ಉಪವಲಯ ಅರಣ್ಯಾಧಿಕಾರಿ ಮಹದೇವ್ ನಾಯಕ್ ಮತ್ತು ಸಿಬ್ಬಂದಿಗಳ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ.

ವಶಪಡಿಸಿಕೊಂಡಿರುವ ಬೀಟಿ ಮರದ ನಾಟಗಳು

ಕಾರ್ಯಚರಣೆಯ ಸಂದರ್ಭ ಬೀಟೆ ಮರದ ನಾಟಗಳ ಸಮೇತ ಟಿಪ್ಪರ್, ಬೊಲೆನೊ ಬ್ಲಾಂಜ ಮತ್ತು ಮಾರುತಿ ಕಾರು ಸಮೇತ ಒಟ್ಟು 3 ವಾಹನಗಳನ್ನು ವಶಕ್ಕೆ ತೆಗೆದುಕೊಂಡು ಮೊಕದ್ದಮೆ ದಾಖಲಿಸಿಕೊಳ್ಳಲಾಗಿದೆ. ತಲೆಮರೆಸಿಕೊಂಡಿರುವ ಆರೋಪಿಗಳ ಬಂಧನಕ್ಕೆ ಪ್ರತ್ಯೇಕ ತಂಡ ರಚಿಸಲಾಗಿದೆ.

error: Content is protected !!