ಬೀಟೆ ಮರ ವಶ

ಶನಿವಾರಸಂತೆ: ಕೂಗೂರು ಎನ್ನುವಲ್ಲಿ ಕಾಫಿ ತೋಟವೊಂದರಿಂದ ಬೀಟೆ ಮರ ಕಡಿದು, ನಾಟಾ ತಯಾರಿಸಿ ಸೋಮಶೇಖರ್ ಎಂಬುವವರ ತೋಟದಲ್ಲಿ ಸಂಗ್ರಹಿಸಿ ಇಡಲಾಗಿದ್ದ ಎರಡು ಬೀಟೆ ನಾಟವನ್ನು ಮಡಿಕೇರಿ ವಿಭಾಗ ಮತ್ತು ಸೋಮವಾರಪೇಟೆ ಉಪವಿಭಾಗದ ಅರಣ್ಯ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ ಚಿಕ್ಕಾರ ಗ್ರಾಮದ ರಘು ಎಂಬಾತನನ್ನು ಬಂದಿಸಿದ್ದು ,ಪ್ರಮುಖ ಆರೋಪಿ ಸೋಮಶೇಖರ್ ತಲೆ ಮರೆಸಿಕೊಂಡಿದ್ದು ಶೋಧ ಕಾರ್ಯ ನಡೆಸುತ್ತಿದ್ದಾರೆ.