ಬೀಟೆ ಮರ ಕಳ್ಳತನ ಪ್ರಕರಣ: ಇಬ್ಬರ ಬಂಧನ

ಸೋಮವಾರಪೇಟೆಯ ಬಾಣಾವರದಲ್ಲಿ ಬೀಟೆ ಮರ ಕಳ್ಳತನವಾಗಿದೆ. ಇಲ್ಲಿನ ದೊಡ್ಡಬ್ಬೂರು ಗ್ರಾಮದಲ್ಲಿನ ಖಾಸಗಿ ಸ್ಥಳದಲ್ಲಿ ಮರಕಡಿತಲೆ ಮಾಡಿದ ಇಬ್ಬರು ಆರೋಪಿಗಳನ್ನು ಅರಣ್ಯ ಇಲಾಖೆಯ ಅಧಿಕಾರಿಗಳು ಬಂಧಿಸಿದ್ದಾರೆ.

ಬಸವನಹಳ್ಳಿ ನಿವಾಸಿಗಳಾದ ಅಜಿತ್ ಮತ್ತು ಕಲ್ಕಂದೂರು ನಿವಾಸಿಯಾದ ನಿಖಿಲ್ ಬಂಧಿತ ಆರೋಪಿಗಳಾಗಿದ್ದು, ಇಲಾಖೆಯ ವಶದಲ್ಲಿದ್ದು ಕಾರ್ಯಾಚರಣೆ ವೇಳೆ ಮತ್ತೊಬ್ಬ ಆರೋಪಿ ಸೋಮಶೇಖರ ಪರಾರಿಯಾಗಿದ್ದಾನೆ.

ಬಂಧಿತ ಆರೋಪಿಗಳಿಂದ ಬೀಟೆ ಮರದ 5 ನಾಟಾ ಮತ್ತು ಒಂದು ಟಿಪ್ಪರ್ ಲಾರಿಯನ್ನು ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ.

error: Content is protected !!