ಬಿರುಸಿನಿಂದ ಸಾಗುತ್ತಿರುವ ರೈತರ ಮನೆ ಬಾಗಿಲಿಗೆ ದಾಖಲೆ ಒದಗಿಸುವ ಕಾರ್ಯ

ಕಂದಾಯ ಇಲಾಖೆಯ ವತಿಯಿಂದ ರೈತರ ಬಾಗಿಲಿಗೆ ಜಮೀನಿನ ದಾಖಲೆ ಪತ್ರ ಒದಗಿಸುವ ಕಾರ್ಯ ಬಿರುಸಿನಿಂದ ಸಾಗಿದೆ. ಮಡಿಕೇರಿ ವಿಧಾನ ಸಭಾಕ್ಷೇತ್ರಕ್ಕೆ ಒಳಪಡುವ ಸೊಮವಾರಪೇಟೆ ಮತ್ತು ಕುಶಾಲನಗರ ತಾಲ್ಲೂಕಿನ ವ್ಯಾಪ್ತಿಯಲ್ಲಿ ರೈತರ ಜಮೀನಿನ ಆರ್.ಟಿ.ಸಿ, ಆದಾಯ,ಜಾತಿ ಪ್ರಮಾಣಪತ್ರ, ರೈತರ ಮಾಹಿತಿ ಪತ್ರ ಮತ್ತು ಅಟ್ಲಾಸ್ ಗಳನ್ನು ಹೊಂದಿರುವ ದಾಖಲೆಗಳನ್ನು ತಲುಪಿಸಲಾಗುತ್ತಿದೆ.ಆಯಾ ಗ್ರಾಮ ಪಂಚಾಯಿತಿಯ ಗ್ರಾಮ ಲೆಕ್ಕಿಗ ರಿಗೆ ಈ ಜವಬ್ದಾರಿ ವಹಿಸಲಾಗಿದ್ದು, ಕುಶಾಲನಗರ ತಾಲ್ಲೂಕಿನ ತೊರೆನೂರು, ಹೆಬ್ಬಾಲೆ, ಕಣಿವೆ ಸುತ್ತಮುತ್ತಲಿನ ಗ್ರಾಮದಲ್ಲಿ ಬಿರುಸುಗೊಂಡಿದೆ.