ಬಿರುಸಿನಿಂದ ಸಾಗುತ್ತಿರುವ ನೊಂದಣಿ ಕಾರ್ಯ

ಕುಶಾಲನಗರ ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ನಡೆಸಲಾಗುತ್ತಿರುವ ನೊಂದಣಿ ಕಾರ್ಯ ಬಿರುಸಿನಿಂದ ಸಾಗಿದೆ.

ಸ್ವತಃ ಕುಶಾಲನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಎಸ್ ಅನಂತಕುಮಾರ್ ಕುಶಾಲನಗರ ಪಟ್ಟಣ ಸುತ್ತಮುತ್ತಲಿನ ಪ್ರದೇಶಗಳನ್ನು ಮುಗಿಸಿ, ನೂತನ ತಾಲ್ಲೂಕಿಗೆ ಒಳಪಡುವ ಸುಂಟಿಕೊಪ್ಪದವರೆಗೆ ರಾತ್ರಿಹಗಲೆನ್ನದೆ ಆಯ್ಕೆ ಪ್ರಕ್ರಿಯೆ ನಡೆಸಲಾಗುತ್ತಿದ್ದು, ಮುಖ್ಯವಾಗಿ ಮತ ಬ್ಯಾಂಕಿನ ಭದ್ರಕೋಟೆಗಳನ್ನು ಬಲ ಪಡಿಸಲಾಗುತ್ತಿದೆ. ಅಂಗಡಿಮುಂಗಟುಗಳು,ರಸ್ತೆ ಬದಿಯಲ್ಲಿನ ಮನೆಗಳನ್ನೂ ಬಿಡದೆ ನೊಂದಣಿ ಕಾರ್ಯ ಕೈಗೊಳ್ಳುತ್ತಿದ್ದಾರೆ.