fbpx

ಬಿದ್ದು ಸಿಕ್ಕಿದ ರೂ. 28 ಸಾವಿರ ನಗದು, ಮೊಬೈಲ್ ಹಿಂತಿರುಗಿಸಿದ ಸುಂಟಿಕೊಪ್ಪ ಆಟೋ ಚಾಲಕರು

ದಾರಿಮಧ್ಯದಲ್ಲಿ ಲೇಡಿಸ್ ಬ್ಯಾಗ್ ನೊಂದಿಗೆ ಬಿದ್ದುಸಿಕ್ಕಿದ ರೂ. 28000 ನಗದು ಹಣ, ಮೊಬೈಲ್ ಮತ್ತು ದಾಖಲಾತಿಯನ್ನು ಆಟೋ ಚಾಲಕರಿಬ್ಬರು ಅದರ ವಾರಸುದಾರರಿಗೆ ಹಿಂತಿರುಗಿಸಿ ಪ್ರಾಮಾಣಿಕತೆ ಮೆರೆದಿದ್ದಾರೆ.

ಸುಂಟಿಕೊಪ್ಪದ ಆಟೋ ಚಾಲಕರಾದ ಮುಜೀಬ್ ಮತ್ತು ಸುನಿಲ್ ಎಂಬಿಬ್ಬರಿಗೆ ಇಂದು ಸಂಜೆ 5.30 ರ ಸಮಯದಲ್ಲಿ‌‌ ಮಾದಾಪುರ ರಸ್ತೆಯ ಪನ್ಯ‌ ಜಂಕ್ಷನ್ ನಲ್ಲಿ ರೂ.28000 ನಗದು ಹಣ, ಆಧಾರ್ ಕಾರ್ಡ್ ಮತ್ತು ಮೊಬೈಲ್ ಇದ್ದ ಲೇಡಿಸ್ ಬ್ಯಾಗ್ ಬಿದ್ದುಸಿಕ್ಕಿದೆ. ಬ್ಯಾಗ್ ಅನ್ನು ಇವರಿಬ್ಬರು ನೇರವಾಗಿ ಸುಂಟಿಕೊಪ್ಪ ಆಟೋ ರಿಕ್ಷಾ ಚಾಲಕರು ಮತ್ತು ಮಾಲೀಕರ ಸಂಘದ ಅಧ್ಯಕ್ಷರಾದ ಎ.ಎಂ. ಷರೀಫ್ ರವರಿಗೆ‌ ಒಪ್ಪಿಸಿದ‌ ಮೇರೆಗೆ ಪೋಲೀಸ್ ಠಾಣೆಗೆ ತೆರಳಿ ಠಾಣಾಧಿಕಾರಿ‌ ಪುನಿತ್ ಕುಮಾರ್ ಅವರಿಗೆ ಮಾಹಿತಿ ನೀಡಲಾಗಿದೆ. ಇದೇ ಸಂದರ್ಭ ಬ್ಯಾಗ್ ನಲ್ಲಿದ್ದ ಮೊಬೈಲ್ ಗೆ ವಾರಸುದಾರರು ಕರೆ ಮಾಡಿದ್ದಾರೆ. ಅವರಿಗೆ ಬ್ಯಾಗ್ ಸಿಕ್ಕಿರುವುದಾಗಿತಿಳಿಸಲಾಯಿತು.

ನಂತರ ಠಾಣೆಗೆ ಬಂದ ಅವರಿಗೆ ಕಳೆದುಹೋಗಿದ್ದ ರೂ. 28000 ನಗದು ಹಣ, ಮೊಬೈಲ್ ಮತ್ತು‌ ದಾಖಲಾತಿಯನ್ನು‌ ಮರಳಿಸಲಾಯಿತು.‌
ಬೆಟ್ಟಗೇರಿ ತೋಟದ ಕಾರ್ಮಿಕರಾಗಿರುವ ರವಿ ಮತ್ತು ಅವರ ಪತ್ನಿ ಬೇರೊಂದು ಆಟೋ ರಿಕ್ಷಾದಲ್ಲಿ ಹೋಗುತ್ತಿದ್ದಾಗ ಅವರಿಗೆ ಅರಿವಿಲ್ಲದಂತೆ ಬ್ಯಾಗ್ ಮಾರ್ಗಮಧ್ಯದಲ್ಲಿ ಬಿದ್ದುಹೋಗಿತ್ತು. ಹಣ, ಮೊಬೈಲ್ ಹಾಗೂ ದಾಖಲಾತಿಗಳನ್ನು ಹಿಂತಿರುಗಿಸಿರುವ ಆಟೋ ಚಾಲಕರ ಪ್ರಾಮಾಣಿಕತೆಗೆ ಶ್ಲಾಘನೆ ವ್ಯಕ್ತವಾಗಿದೆ.

error: Content is protected !!