ಬಿಜೆಪಿ ತೆಕ್ಕೆಗೆ ಸಿದ್ದಾಪುರ ಗ್ರಾಮ ಪಂಚಾಯಿತಿ ಆಡಳಿತ

ಸಿದ್ದಾಪುರ :ಕಾಂಗ್ರೆಸ್ ಭದ್ರಕೋಟೆಯಾಗಿ ಹಲವು ವರ್ಷಗಳಿಂದ ಅಧಿಕಾರದಲ್ಲಿದ್ದ ಪಂಚಾಯಿತಿಗೆ ಇದೀಗ ಬಿಜೆಪಿ 15ಸ್ಥಾನ ಗೆಲ್ಲುವ ಮೂಲಕ ಪಂಚಾಯಿತಿ ಆಡಳಿತವನ್ನು ತನ್ನದಾಗಿಸಿಕೊಂಡಿದೆ.
ಈ ಹಿಂದಿನ ಆಡಳಿತದಲ್ಲಿ 1ಸ್ಥಾನವೂ ಇಲ್ಲದ ಬಿಜೆಪಿ
ಇದೇ ಮೊದಲ ಬಾರಿಗೆ 15 ಸ್ಥಾನ ಗಳಿಸುವ ಮೂಲಕ ಪಂಚಾಯಿತಿಯನ್ನು ತನ್ನದಾಗಿಸಿಕೊಂಡಿದೆ.

ಕಾಂಗ್ರೆಸ್ ಭದ್ರಕೋಟೆಯಾಗಿದ್ದ,
ಸಿದ್ದಾಪುರದಲ್ಲಿ ಕಾಂಗ್ರೆಸ್ ಪಕ್ಷದ ಗೊಂದಲದಿಂದ ಬಿಜೆಪಿ ಹೆಚ್ಚು ಸ್ಥಾನ ಗಳಿಸಲು ಸಾಧ್ಯವಾಗಿದೆ.
ಜಿಲ್ಲೆಯಲ್ಲಿ ಅತಿ ದೊಡ್ಡ ಗ್ರಾಮ ಪಂಚಾಯಿತಿ 25 ಸದಸ್ಯರು ಹೊಂದಿರುವ ಪಂಚಾಯಿತಿಯ ವಿವಿಧ ವಾರ್ಡುಗಳಿಗೆ 87 ಮಂದಿ ಅಭ್ಯರ್ಥಿಗಳು ಸ್ಪರ್ಧೆ ಯಲ್ಲಿದ್ದರು.
ಮತದಾರರ ಬದಲಾವಣೆಯ ಹಿನ್ನೆಲೆಯಲ್ಲಿ 15 ಬಿಜೆಪಿ, 9 ಕಾಂಗ್ರೆಸ್, 1 ಪಕ್ಷೇತರ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ.