fbpx

ಬಿಜೆಪಿ ಕಾರ್ಯಕರ್ತನ ಹತ್ಯೆ ಖಂಡಿಸಿ ಬೃಹತ್ ಪ್ರತಿಭಟನೆ

ಸುಳ್ಯಾದ ಬೆಳ್ಳಾರೆಯಲ್ಲಿ ಯುವ ಬಿಜಿಪಿ ಕಾರ್ಯಕರ್ತ ಹತ್ಯೆ ಖಂಡಿಸಿ ಸೋಮವಾರಪೇಟೆ ತಾಲ್ಲೂಕಿನ ಶನಿವಾರಸಂತೆಯಲ್ಲಿ ವಿಶ್ವಹಿಂದು ಪರಿಷತ್, ಭಜರಂಗದಳದ ವತಿಯಿಂದ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.

ಅರ್ಧಗಂಟೆ ಶನಿವಾರಸಂತೆ ರಸ್ತೆ ತಡೆ ಮಾಡಿದ ಪ್ರತಿಭಟನಾಕಾರರು ಆರೋಪಿಗಳನ್ನು ಮುಖ್ಯಮಂತ್ರಿಗಳು ಗೃಹಸಚಿವರು ಬಂದಿಸಲು ಸೂಚಿಸಿ ಮೌನವಾಗಿದ್ದಾರೆ ಎಂದು ಆರೋಪಿಸಿದರು.

ಜೈಲಿನಲ್ಲಿ ಎಲ್ಲ ರೀತಿಯ ಹೈಫೈ ಜೀವನ ನಡೆಸಲು ಅನುವು ಮಾಡಿಕೊಡುವ ರೀತಿಯಲ್ಲಿ ಈಗಿನ ಆಡಳಿತ ಸರ್ಕಾರ ನೋಡಿಕೊಳ್ಳುತ್ತಿರುವುದು ನೋಡಿದರೆ,ಇನ್ನೂ ಹಿಂದೂಗಳ ಹತ್ಯೆಯಾಗಬೇಕು ಎಂದು ಮನಸ್ಸಿನಲ್ಲಿ ಇದ್ದಂತೆ ಇದೆ ಎಂದು ವಿಶ್ವ ಹಿಂದೂಪರಿಷತ್ ಜಿಲ್ಲಾ ಸಂಚಾಲಕ ಅನಿಶ್ ಕಿಡಿಕಾರಿದರು.

ಕಾರ್ಯಕರ್ತರು ನಮ್ಮದೆ ಪಕ್ಷ ಹಿಂದೂಗಳನ್ನು ರಕ್ಷಣೆಗೆ ಬಿಜೆಪಿ ಇದೆ ಎಂದು ನಾವು ಇದ್ದೆವು.
ಹಿಂದೂಗಳನ್ನು ಮುಗೀಸಲು ಬಿಜೆಪಿ ಪಕ್ಷ ಸಜ್ಜಾಗಿದೆ.ಮೊನ್ನೆ ಸಂಸದ ತೆಜಸ್ವಿ ಸೂರ್ಯರವರು ಹೇಳಿಕೆಯಲ್ಲಿ ಎಲ್ಲ ಮನೆಯನ್ನು ಕಾಯಲು ಸಾದ್ಯವಾಗುತ್ತ ಎಂದು ಹಗುರವಾಗಿ ಮಾತನಾಡಿದ್ದಾರೆ,
ಕಾಯುವುದು ಬೇಡ ನಾವು ವಿಶ್ವಹಿಂದೂ ಪರಿಷತ್ ಭಜರಂಗದಳ ಕಾರ್ಯಕರ್ತರು ನಾವು ಕಾಯುತ್ತೆವೆ ಎಂದು ತಾಲೂಕು ಸಂಚಾಲಕ ನೆಗಳ್ಳೆ ಜಿವನ್ ಹೇಳಿದರು.ಹಿಂದೂ ರಾಷ್ಟ್ರದಲ್ಲಿ ಹಿಂದೂಗಳ ಹತ್ಯೆಯಾಗುತ್ತಿರುವುದು ದುರಂತ.ತಪ್ಪು ಮಾಡಿದವರಿಗೆ ಗಲ್ಲುಶಿಕ್ಷೆಯಾಗಲಿˌಕೇವಲ ಬಂಧಿಸಿ ಜಾಮಿನಿನಲ್ಲಿ ಬಿಡುಗಡೆಮಾಡಬೇಡಿ.ಎಂದು ಬಿಜೆಪಿ ಪ್ರಮುಕ ರಘು ಒತ್ತಾಯಿಸಿದರು.

error: Content is protected !!