ಬಿಜೆಪಿ ಎಸ್.ಟಿ ಮೋರ್ಚಾದಿಂದ ಪೂಜೆ

ಬಿಜೆಪಿ ಸೋಮವಾರಪೇಟೆ ತಾಲ್ಲೂಕು ಎಸ್.ಟಿ ಮೋರ್ಚಾದ ವತಿಯಿಂದ ನೂತನವಾಗಿ ರಾಷ್ಟ್ರ ಪತಿ ಹುದ್ದೆಯನ್ನು ಅಲಂಕರಿಸಿದ ದ್ರೌಪದಿ ಮುರ್ಮು ರವರ ಹೆಸರಿನಲ್ಲಿ ಬಸವನಹಳ್ಳಿ ಗ್ರಾಮದ ಚಾಮುಂಡೇಶ್ವರಿ ದೇವಾಲಯದಲ್ಲಿ ಪೂಜೆ ಸಲ್ಲಿಸಿ,ಬಳಿಕ ಬಸವನಹಳ್ಳಿ ಗಿರಿಜನ ಆಶ್ರಮ ಶಾಲೆಯಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್ ಅಂಬೇಡ್ಕರ್ ಭಾವಚಿತ್ರಕ್ಕೆ ಮಾಲರ್ಪಣೆ ಮಾಡಲಾಯಿತು.
ಈ ಸಂದರ್ಭ ಮೋರ್ಚಾದ ಸದಸ್ಯ ಮೋಹನ್ ಮತ್ತು ಪ್ರಭಾಕರ್ ರಾಷ್ಟ್ರಪತಿಯವರ ವಿಚಾರಧಾರೆಗಳನ್ನು ತಿಳಿಸಿದರು. ಇದೇ ಸಂದರ್ಭ ವಿದ್ಯಾರ್ಥಿಗಳಿಗೆ ಸಿಹಿ ಹಂಚಿ ಅಭಿನಂಧನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.