ಬಿಜೆಪಿಯಿಂದ ಜನಜಾಗೃತಿ ಸಮಾವೇಶಕ್ಕೆ ಪೂರ್ವಭಾವಿ ಸಭೆ


ಆಗಸ್ಟ್ 26 ರಂದು ಕಾಂಗ್ರೆಸ್ ಎಸ್ಪಿ ಚಲೋಗೆ ಕೌಂಟರ್ ನೀಡಲು ಬಿಜೆಪಿ ಜನಜಾಗೃತಿ ಸಮಾವೇಶಕ್ಕೆ ಜಿಲ್ಲೆಯ ಇಬ್ಬರು ಶಾಸಕರು, ಪದಾಧಿಕಾರಿಗಳಿಂದ ಜಿಲ್ಲೆಯ,ಅಲ್ಲಲ್ಲಿ ಪೂರ್ವ ಭಾವಿ ಸಭೆ ಯನ್ನು ನಡೆಸುತ್ತಿದ್ದಾರೆ.ವಿರಾಜಪೇಟೆ, ಪೂನ್ನಂಪೇಟೆ, ಗೋಣಿಕೊಪ್ಪದ ಭಾಗದಲ್ಲಿ ಕೆ.ಜಿ ಬೋಪಯ್ಯ, ಸೋಮವಾರಪೇಟೆಯ ಭಾಗದಲ್ಲಿ ಶಾಸಕ ಅಪಚ್ಚು ರಂಜನ್,ಮಡಿಕೇರಿಯ ಭಾಗದಲ್ಲಿ ಪಕ್ಷದ ಇತರೆ ಪದಾಧಿಕಾರಿಗಳು ಸಭೆ ನಡೆಸುತ್ತಿದ್ದಾರೆ.


ಈಗಾಗಲೇ ಸಮಾವೇಶಕ್ಕೆ ಅನುಮತಿ ಕೋರಿ ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ರಿಗೆ ಮನವಿ ಮಾಡಲಾಗಿದ್ದು, ಈಗಾಗಲೇ ಆಯಾ ಕ್ಷೇತ್ರದ ಹೋಬಳಿ ಮಟ್ಟದಲ್ಲಿ ಸಭೆ ನಡೆಸಿ, ಅನುಮತಿ ದೊರೆತಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕರ್ತರು ಆಗಮಿಸುವಂತೆ ಶಾಸಕರು ಮತ್ತು ಪದಾಧಿಕಾರಿಗಳು ಮನವಿ ಮಾಡಿದ್ದಾರೆ.