ಬಾಳೆ ಗಿಡ ನೆಟ್ಟು ಆಕ್ರೋಶ

ದಕ್ಷಿಣ ಕೊಡಗಿನ ಗೋಣಿಕೊಪ್ಪ ಬೈಪಾಸ್ ರಸ್ತೆಯ ಪರಿಸ್ಥಿತಿಯನ್ನು ಕಂಡು ರಸ್ತೆ ವಾಹನ ಸಂಚಾರಕ್ಕೆ ಯೋಗ್ಯವಾಗಿಲ್ಲ, ಅದರ ಬದಲು ಬಾಳೆ ಗಿಡ ನೆಟ್ಟು ವ್ಯವಸಾಯ ಮಾಡುವ ಎಂದು ಸಾರ್ವಜನಿಕರು ತಮ್ಮ ಆಕ್ರೋಶವನ್ನು ರಸ್ತೆ ಮದ್ಯದಲ್ಲೇ ನೆಟ್ಟು ವ್ಯಕ್ತಪಡಿಸಿದ್ದಾರೆ.
ಕೇಂದ್ರ ಹಾಗು ರಾಜ್ಯ ಸರ್ಕಾರದಿಂದ ಹಣ ಬಿಡುಗಡೆಯಾಗಿದ್ದು ನೆಪ ಮಾತ್ರಕ್ಕೆ ತೇಪೆ ಹಚ್ಚುವ ಕೆಲಸ ನಡೆದಿದ್ದು, ಒಂದೆರೆಡು ದಿನದಲ್ಲಿ ಮತ್ತದೇ ಗುಂಡಿ ನಿರ್ಮಾಣವಾಗುವುದರಿಂದ ವಾಹನಗಳು ಕೆಟ್ಟು ಗ್ಯಾರೇಜ್ ಸೇರುವಂತಾಗುತ್ತಿವೆ ಎಂದು ಆರೋಪಿಸಿದ್ದಾರೆ.