fbpx

ಬಾಳೆಲೆ ಶಾಲಾ ಆರಂಭೋತ್ಸವದ ಸಡಗರ

ಬಾಳೆಲೆ ವಿಜಯಲಕ್ಷ್ಮಿ ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿಗಳನ್ನು ಶೈಕ್ಷಣಿಕ ವರ್ಷ ಆರಂಭಕ್ಕೆ ಸಿಹಿ ಹಂಚಿ, ಪಠ್ಯ ಪುಸ್ತಕ ವಿತರಣೆ ಮಾಡಿ ಶಾಲೆಗೆ ಬರಮಾಡಿಕೊಂಡು ಮಾತನಾಡಿದ ಬಾಳೆಲೆ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಪೋಡಮಾಡ ಸುಕೇಶ್ ಭೀಮಯ್ಯನವರು ವಿದ್ಯಾರ್ಥಿಗಳಿಗೆ ಶಾಲಾ ವಾತಾವರಣದಲ್ಲಿ ಭಯದ ವಾತಾವರಣ ದೂರ ಮಾಡಲು ಶಿಕ್ಷಣ ಇಲಾಖೆ ಆರಂಭೋತ್ಸವಕ್ಕೆ ಹಬ್ಬದ ಮೆರುಗನ್ನು ತುಂಬಿರುವುದು ಗ್ರಾಮೀಣ ಪ್ರದೇಶದ ಮಕ್ಕಳಲ್ಲಿ ಹೊಸ ಚೈತನ್ಯ ತುಂಬಿದ್ದು ಮಕ್ಕಳು ಶೈಕ್ಷಣಿಕ ವರ್ಷದಲ್ಲಿ ಗುರುಗಳ ಮಾರ್ಗದರ್ಶನದಲ್ಲಿ ಉತ್ತಮ ಸಾಧನೆ ಮಾಡುವಂತೆ ಶುಭ ಹಾರೈಸಿದರು.

ಬಾಳೆಲೆ ವಿದ್ಯಾಸಂಸ್ಥೆಯ ಅಧ್ಯಕ್ಷ ರಾದ ಅಳಮೇಂಗಡ ಬೋಸ್ ಮಂದಣ್ಣ ಮಾತನಾಡಿ ಸರ್ಕಾರ ವಿದ್ಯಾರ್ಥಿಗಳ ವ್ಯಾಸಂಗಕ್ಕೆ ಸಾಕಷ್ಟು ಯೋಜನೆಗಳನ್ನು ರುಪಿಸಿದ್ದು ಇದರ ಸದುಪಯೋಗ ಪಡಿಸಿಕೊಂಡು ಮುಂದಿನ ಗುರಿಯತ್ತ ಸಾಗಲು ಶ್ರಮಿಸುವಂತೆ ಕರೆ ನೀಡಿದರು ಬಾಳೆಲೆ ವಿದ್ಯಾಸಂಸ್ಥೆಯ ಗೌರವ ಕಾರ್ಯದರ್ಶಿ ಚಿಮ್ಮಣಮಾಡ ಕೃಷ್ಣ ಗಣಪತಿ, ಉಪಾಧ್ಯಕ್ಷ ರಾದ ಕಾಯಮಾಡ ರಾಜ, ಕಿರುದಂಡ ದೇವಯ್ಯ, ನಿರ್ದೇಶಕರಾದ ಕಾಟಿಮಾಡ ಶರೀಣ್ ಮುತ್ತಣ್ಣ, ಅಳಮೇಂಗಡ ಸುರೇಶ್ ಸುಬ್ಬಯ್ಯ, ಮುಖ್ಯ ಶಿಕ್ಷಕರಾದ ಚಂದ್ರಶೇಖರ್, ಮತ್ತು ಅಧ್ಯಾಪಕ ವೃಂದ ಹಾಜರಿದ್ದರು.

error: Content is protected !!