ಬಾಳೆಲೆ ಫಾರ್ಮರ್ಸ್ ಅಸೋಸಿಯೇಷನ್ ವತಿಯಿಂದ ಪ್ರಪ್ರಥಮ ಬಾರಿಗೆ ಹೋಬಳಿ ಮಟ್ಟದ ಕೆಸರು ಗದ್ದೆ ಕ್ರೀಡೋತ್ಸವ

ನಿಟ್ಟೂರು ಗ್ರಾಮದ ಡಾ ಮಾಪಂಗಡ ಪ್ರತಾಪ್ ಬೆಳ್ಳಿಯಪ್ಪ ನವರ ಗದ್ದೆ ಯಲ್ಲಿ ಬಾಳೆಲೆ ಫಾರ್ಮರ್ಸ್ ಅಸೋಸಿಯೇಷನವತಿಯಿಂದ “ಅಜಾಧಿಕಾ ಅಮೃತ ಮಹೋತ್ಸವ” ಹೊಬಳಿ ಮಟ್ಟದ ಕೆಸರು ಗದ್ದೆ ಕ್ರೀಡೋತ್ಸವಕ್ಕೆ ಒಲಿಂಪಿಯನ್ ಬಾಳೆಯಡ ಸುಬ್ರಮಣಿ ಮತ್ತು ಫಾರ್ಮರ್ಸ್ ಅಸೋಸಿಯೇಷನ್ ಅಧ್ಯಕ್ಷರಾದ ಅಳಮೇಂಗಡ ಬೋಸ್ ಮಂದಣ್ಣ ಚಾಲನೆ ನೀಡಿದರು ನಂತರ ನಡೆದ ಕೆಸರುಗದ್ದೆ ವಾಲಿಬಾಲ್ ಪಂದ್ಯಾಟದಲ್ಲಿ 12 ತಂಡಗಳು, ಹಗ್ಗ ಜಗ್ಗಾಟದಲ್ಲಿ 8 ತಂಡಗಳು ಸಿನಿಯರ್, ಜೂನಿಯರ್ ಮತ್ತು ಸಬ್ಬ್ ಜೂನಿರ್ ಓಟದ ಸ್ಪರ್ಧೆಗಳಲ್ಲಿ 64 ಮಂದಿ ಭಾಗವಹಿಸಿದ್ದರು .ಇದೇ ಪ್ರಥಮ ಬಾರಿಗೆ ಬಾಳೆಲೆ ಭಾಗದಲ್ಲಿ ನಡೆದ ಕೆಸರುಗದ್ದೆ ಕ್ರೀಡೋತ್ಸವ ವೀಕ್ಷಣೆಗೆ ಆಯೋಜಕರ ನಿರೀಕ್ಷೆಗೂ ಮೀರಿ ಜನ ಜಮಾಯಿಸಿದ್ದರು.

ಯಾವುದೇ ಜಾತಿ ಧರ್ಮಗಳ ಭೇದವಿಲ್ಲದೆ ಭಾಗವಹಿಸಿದ್ದವರಲ್ಲಿ
ವಿಶೇಷವಾಗಿ ಗಿರಿಜನರ ಹರ್ಷೋದ್ಗಾರ ಮುಗಿಲು ಮುಟ್ಟಿತ್ತು ವಾಲಿಬಾಲ್ ಧನಲಕ್ಷ್ಮಿ ಇಲೆವೆನ್ ಬಾಳೆಲೆ‌ ಪ್ರಥಮ ಕುಂಬಾರಕಟ್ಟೆ ಹಾಡಿ ತಂಡ ದ್ವಿತೀಯ .ಹಗ್ಗ ಜಗ್ಗಾಟ ಪುರುಷರ ವಿಭಾಗದಲ್ಲಿ ದಲ್ಲಿ ಪ್ರಥಮ ಫಾರೆಸ್ಟ್ ಸೈಡರ್ಸ ವಡ್ಡರಮಾಡು, ದ್ವಿತೀಯ ವಿಜಯ ಗ್ರಾಮೀಣ ಯುವಕ ಸಂಘ ಕಾರ್ಮಾಡು. ಮಹಿಳೆಯರ ವಿಭಾಗದಲ್ಲಿ ಅಕ್ಷಯ ಗ್ರೂಪ್ ವಡ್ಡರಮಾಡು ಪ್ರಥಮ, ಕಾರ್ಮಾಡು ಕೂಯಿನ್ಸ ದ್ವಿತೀಯ ಸಂಜೆ ನಡೆದ ಸಮಾರೊಪ ಸಮಾರಂಭದಲ್ಲಿ ಬಾಳೆಲೆ ‌ಫಾರ್ಮಾರ್ಸ್ ಅಸೋಸಿಯೇಷನ್ ಅಧ್ಯಕ್ಷರಾದ ಅಳಮೇಂಗಡ ಬೋಸ್ ಮಂದಣ್ಣ ಸರ್ವರನ್ನು ಸ್ವಾಗತಿಸಿ ಪ್ರಾಸ್ತಾವಿಕ ನುಡಿಗಳನ್ನು ಅಡಿದರು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ನಿವೃತ್ತ ಪೊಲೀಸ್ ವರಿಷ್ಠಾಧಿಕಾರಿಗಳಾದ ಅರಮನಮಾಡ ಸುರೇಶ್ ಮಾತನಾಡಿ ಸಣ್ಣ ವಯಸ್ಸಿನಲ್ಲೇ ಶಿಕ್ಷಣ ಮತ್ತು ಕ್ರೀಡೆ ಎರಡೂ ಕ್ಷೇತ್ರಕ್ಕೂ ಸಮಾನವಾದ ಒತ್ತನ್ನು ನೀಡುವುದರ ಮೂಖೆನ ಮೇಲೆ ಬರಬೇಕೆಂದು ಕರೆ ನೀಡಿದರು ನಿಟ್ಟೂರು ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಕಾಟಿ ಮಾಡ ಶರೀನ್ ಮುತ್ತಣ್ಣ ಬಾಳೆಲೆ ಗ್ರಾ.ಪಂ ಅಧ್ಯಕ್ಷರಾದ ಪೊಡಮಾಡ ಸುಕೇಶ್ ಭೀಮಯ್ಯ ಪೊನ್ನಪ್ಪಸಂತೆ ಗ್ರಾ.ಪಂ ಅಧ್ಯಕ್ಷರಾದ ಚೆಯೆಕ್ ಪೂವಂಡ ಪ್ರಭ, ಬಾಳೆಲೆ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾದ ಚಿಮ್ಮಣಮಾಡ ಕೃಷ್ಣ ಗಣಪತಿ, ಬಾಳೆಲೆ ಎಂ.ಪಿ.ಸಿ ಯಂ.ಸ್ ಅಧ್ಯಕ್ಷರಾದ ‌ಅರಮಣ ಮಾಡ ಗಣಪತಿ, ನಿಟ್ಟೂರು ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಪಡಿಞರಂಡ ಕವಿತಾ ಪ್ರಭು, ಬಾಳೆಲೆ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಕೊಕ್ಕೇಂಗಡ ಸ್ಮೀತಾ, ಫಾರ್ಮರ್ಸ್ ಅಸೋಸಿಯೇಷನ್ ಉಪಾಧ್ಯಕ್ಷ ರಾದ ಅಳಮೇಂಗಡ ಸುರೇಶ್ ಸುಬ್ಬಯ್ಯ, ಗೌರವ ಕಾರ್ಯದರ್ಶಿ ಅರಮಣಮಾಡ ದಿನು ಬೆಳ್ಳಿಯಪ್ಪ , ನಿಟ್ಟೂರು ಗ್ರಾಮ ಪಂಚಾಯಿತಿ ಸದಸ್ಯರಾದ ಚಕ್ಕೇರ ಸೂರ್ಯ ಅಯ್ಯಪ್ಪ ,ಅಳಮೇಂಗಡ ಪವಿತಾ, ಫಾರ್ಮ್ಸ್ ಅಸೋಸಿಯೇಷನ್ ಕ್ರೀಡಾ ಕಾರ್ಯದರ್ಶಿ ಚಕ್ಕೇರ ದಿಲಿಪ್ ಬೋಪಣ್ಣ, ಖಜಾಂಚಿ ಪೊಡಮಾಡ ಗಿರೀಶ್ ಮಾಚಯ್ಯ, ನಿರ್ದೇಶಕರಾದ ಅಳಮೇಂಗಡ ದಿಲು ತಿಮ್ಮಯ್ಯ, ಮಾಚಂಗಡ ವಿಭಿನ್ ಪೂಡಮಾಡ ನವೀನ್ ಹಾಜರಿದ್ದರು. ಕಾರ್ಯದರ್ಶಿ ಅರಮಣಮಾಡ ದಿನು ಬೆಳ್ಳಿಯಪ್ಪ ವಂದಿಸಿದರು ವಿಜಯಲಕ್ಷ್ಮಿ ಪ್ರೌಢಶಾಲಾ ವಿದ್ಯಾರ್ಥಿಗಳು ಪ್ರಾರ್ಥಿಸಿದರುಪಡಿಞರಂಡ ಪ್ರಭು ಕುಮಾರ್ ನಿರೂಪಿಸಿದರು.

error: Content is protected !!