ಬಾಲಕಿಗೆ ನೆರವಿನ ಹಸ್ತ ಚಾಚಿದ ಪಂಚಾಯ್ತಿ ಸದಸ್ಯೆ

ಸಾರ್ಥಕತೆ ಮೆರೆದ ಗ್ರಾ.ಪಂ ಸದಸ್ಯೆ
ನೆಲ್ಯಹುದಿಕೇರಿ ನಲ್ವತೇಕ್ರೆ ನಿವಾಸಿಯಾದ 8 ನೇ ತರಗತಿ ವಿದ್ಯಾರ್ಥಿನಿಗೆ ಅನಾರೋಗ್ಯದಿಂದ ತನ್ನ ಎರಡೂ ಕಾಲಿನ ಸ್ವಾಧೀನ ಕಳೆದುಕೊಂಡಿದ್ದು, ಓಡಾಡಲಾಗದ ಪರಿಸ್ಥಿತಿಯಲ್ಲಿದ್ದಳು.
ಇದನ್ನು ಅರಿತ ಗ್ರಾಮ ಪಂಚಾಯ್ತಿ ಸದಸ್ಯೆ ಸುಜಾತ ಎಂಬುವವರು ಬಾಲಕಿಯ ನೆರವಿಗೆ ಬಂದಿದ್ದಾರೆ.
ಓದಿನಲ್ಲೂ ಚುರುಕಾಗಿರುವ ಬೆಳೆಯುವ ಈ ವಿದ್ಯಾರ್ಥಿನಿಗೆ ಗ್ರಾಮ ಪಂಚಾಯತಿಯ ವತಿಯಿಂದ ವೀಲ್ ಚೇರ್ ಒದಗಿಸಿ ಕೊಡುವ ಮೂಲಕ ಸಾರ್ಥಕತೆ ಮೆರೆದಿದ್ದಾರೆ.