ಬಾಯಿ ತಪ್ಪಿನಿಂದ “ಪೋಕ್೯” ಬದಲು ” ಬೀಫ್” ಎಂಬ ಪದ ಬಳಕೆ : ಬ್ರಿಜೇಶ್ ಕಾಳಪ್ಪ ಸಮರ್ಥನೆ

ಕೊಡಗು:ಮಾಜಿ ಮುಖ್ಯಮಂತ್ರಿ ಗೋ ಹತ್ಯೆ ನಿಷೇಧ ಸಂಬಂಧಿಸಿದಂತೆ ಮಾತನಾಡುವ ದಾಟಿನಲ್ಲಿ ಕೊಡವರು ಪೋರ್ಕ್(ಹಂದಿ ಮಾಂಸ) ತಿನ್ನುತ್ತಾರೆ ಎನ್ನುವ ಬದಲು ಬೀಫ್(ಗೋ ಮಾಂಸ) ತಿನ್ನುತ್ತಾರೆ ಎಂದು ಬಾಯಿ ತಪ್ಪಿನಿಂದ ಹೇಳಿದ್ದಾರೆ ಎಂದು ಎಐಸಿಸಿ ವಕ್ತಾರ ಬ್ರಿಜೇಶ್ ಕಾಳಪ್ಪ ಸಮರ್ಥಿಸಿಕೊಂಡಿದ್ದಾರೆ.ಗ್ರಾಮ ಪಂಚಾಯ್ತಿ ಚುನಾವಣೆ ಮುಂದಿಟ್ಟುಕೊಂಡು ಬಿಜೆಪಿಯವರು ಪ್ರತಿಭಟನೆಗೆ ಮುಂದಾಗಿದ್ದಾರೆ,ಈಗಾಗಲೇ ಸಿದ್ದರಾಮಯ್ಯ ವಿಷಾಧ ವ್ಯಕ್ತಪಡಿಸಿದ್ದಾರೆ ಎಂದು ತಿಳಿಸಿದ್ದಾರೆ.