ಬಾಕ್ಸ್ಟರ್ ಸಂಸ್ಥೆಯಿಂದ ಕೊಡಗು ಮೆಡಿಕಲ್ ಕಾಲೇಜಿಗೆ ಕೊಡುಗೆ.

ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಗೆ ಬೆಂಗಳೂರಿನ ಬಾಕ್ಸ್ಟರ್ ಇನೋವೇಶನ್ಸ್ ಅಂಡ್ ಬ್ಯುಸಿನೆಸ್ ಸೊಲ್ಯೂಷನ್ಸ್ ಸಂಸ್ಥೆಯು ಕೋವಿಡ್ ಸಂಬಂಧಿತ ಅನೇಕ ಸಾಮಾಗ್ರಿಗಳನ್ನು ಕೊಡುಗೆಯಾಗಿ ನೀಡಿದೆ.

ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಡೀನ್ ಡಾ.ಕಾಯ೯ಪ್ಪ ಅವರು ಸಾಮಾಗ್ರಿಗಳನ್ನು ಸ್ವೀಕರಿಸಿ ಬಾಕ್ಸ್ಟರ್ ಸಂಸ್ಥೆಗೆ ಕೖತಜ್ಞತೆ ಸಲ್ಲಿಸಿದರು. ಬಾಕ್ಸ್ಟರ್ ಸಂಸ್ಥೆಯ ವತಿಯಿಂದ 4500 ಮಾಸ್ಕ್ ಗಳು, 750 ಫೇಸ್ ಶೀಲ್ಡ್, 750 ಸ್ಯಾನಿಟೈಸರ್, 5 ಸ್ಯಾನಿಟೈಸರ್ ಸ್ಟಾಂಡ್ ಗಳನ್ನು ನೀಡಲಾಗಿದೆ.

ವಿಶೇಷ ಮಕ್ಕಳ ಶಾಲೆಗೂ ಕೊಡುಗೆ-

ಅಂತೆಯೇ ಬಾಕ್ಸ್ಟರ್ ಸಂಸ್ಥೆಯ ವತಿಯಿಂದ ಮಡಿಕೇರಿಯಲ್ಲಿನ ಕೊಡಗು ವಿದ್ಯಾಲಯದ ವಿಶೇಷ ಮಕ್ಕಳ ಶಾಲೆಯಲ್ಲಿನ 55 ಮಕ್ಕಳಿಗೆ ಪಠ್ಯ ಮತ್ತು ಪಠ್ಯೇತರ ಸಂಬಂಧಿತ ವಸ್ತುಗಳಾದ ಶಾಲಾ ಬ್ಯಾಗ್, ಜಾಮೆಟ್ರಿ ಪೆಟ್ಟಿಗೆ, ಕ್ರೇಯಾನ್ಸ್, ವಾಟರ್ ಬಾಟಲ್, ಲಂಚ್ ಬಾಕ್ಸ್, ಪುಸ್ತಕಗಳನ್ನು ಕೊಡುಗೆಯಾಗಿ ನೀಡಲಾಯಿತು.

error: Content is protected !!