ಬಾಕಿ ಇರುವ ಪ್ರಕರಣಗಳ ತ್ವರಿತ ಪತ್ತೆಗೆ ಸೂಚನೆ, ಹೆಚ್ಚಿನ ಸಿಸಿಟಿವಿಗಳ ಅಳವಡಿಕೆಗೆ ಕ್ರಮ: ಗೃಹ ಸಚಿವ ಅರಗ ಜ್ಞಾನೇಂದ್ರ

ವಿಧಾನಸಭೆ ಪ್ರಶ್ನೋತ್ತರ ಕಲಾಪ ದಲ್ಲಿ  ಮಡಿಕೇರಿ ಶಾಸಕ ಅಪ್ಪಚ್ಚು ರಂಜನ್ ಮಾತನಾಡುತ್ತಾ, ಕೊಡಗು ಜಿಲ್ಲೆಯಲ್ಲಿ ಅಸ್ಸಾಂ,  ಬಾಂಗ್ಲಾ ದೇಶದಿಂದ ಬಂದ ಕೂಲಿ ಕಾರ್ಮಿಕರನ್ನು ಪತ್ತೆ ಹಚ್ಚಬೇಕು. ಕಾರ್ಮಿಕರ ಬಗ್ಗೆ ಪೊಲೀಸ್ ಠಾಣೆಯಲ್ಲಿ ದಾಖಲಾತಿ ಮಾಡಿಕೊಳ್ಳಬೇಕು. ಇಲ್ಲದೆ ಇದ್ದರೆ ಕ್ರಿಮಿನಲ್ ಕೇಸ್ ಮಾಡಿದಾಗ ಪತ್ತೆ ಕಷ್ಟ.   ಕೊಡಗಿನಲ್ಲಿ ಕೇವಲ ‌20 ಸಿಸಿ ಟಿವಿ ಅಳವಡಿಸಲಾಗಿದೆ.
ಮಡಿಕೇರಿಯಲ್ಲಿ ಹೆಚ್ಚು ಸಿಸಿ ಟಿವಿ ಹಾಕಬೇಕೆಂದು ಮನವಿ ಮಾಡಿದರು.

ಇದಕ್ಕೆ ಪ್ರತಿಕ್ರಿಯಿಸಿದ ಗೃಹ ಸಚಿವರಾದ ಅರಗ ಜ್ಞಾನೇಂದ್ರ, ‘ಈ ಬಗ್ಗೆ ವಿಶೇಷ ಗಮನಹರಿಸಲಾಗಿದೆ. ಬಾಕಿ ಇರುವ ಪ್ರಕರಣಗಳ ಪತ್ತೆಗೆ ಕ್ರಮಕೈಗೊಳ್ಳಲಾಗುತ್ತದೆ.
ಕೊಡಗು, ಕೇರಳ, ಕರ್ನಾಟಕ ಗಡಿಯಲ್ಲಿರುವ ಕಾರಣಕ್ಕಾಗಿ ಪತ್ತೆ ಹಚ್ಚಲು ಕಷ್ಟವಾಗುತ್ತಿದೆ.

ಆದರೂ ಸರಿಯಾದ ರೀತಿಯಲ್ಲಿ ಪತ್ತೆಗೆ ಸೂಚನೆ ನೀಡಲಾಗುವುದು. ಹೆಚ್ಚಿನ ಸಿಸಿ ಟಿವಿಗಳನ್ನು ಪೊಲೀಸ್ ಇಲಾಖೆಯಿಂದ ಅಳವಡಿಸಲು ಕ್ರಮಕೈಗೊಳ್ಳಲಾಗಿದೆ.
ಬೆಂಗಳೂರು ಹೊರತಾಗಿ ಇತರ ಕಡೆಗಳಲ್ಲಿ ಇಲಾಖೆಯಿಂದ ಹೆಚ್ಚು ಸಿಸಿ ಟಿವಿ ಹಾಕಿಲ್ಲ. ಮುಂದಿನ ದಿನಗಳಲ್ಲಿ ಹೆಚ್ಚು ‌ಸಿಸಿ ಟಿವಿ ಅಳವಡಿಕೆಗೆ ಕ್ರಮಕೈಗೊಳ್ಳಲಾಗಿದೆ ಎಂದರು.

error: Content is protected !!