ಬಹಿರಂಗ ಹರಾಜು

ಮಡಿಕೇರಿ ನಗರದಲ್ಲಿರುವ ಕೋಟೆ ಶ್ರೀ ಗಣಪತಿ ದೇವಾಲಯದಲ್ಲಿ ಪ್ರತಿ ವರ್ಷವೂ ರೂಢಿ ಸಂಪ್ರದಾಯದಂತೆ ಅದ್ದೂರಿಯಾಗಿ ಶ್ರೀ ಗಣೇಶೋತ್ಸವವನ್ನು ಆಚರಿಸಿಕೊಂಡು ಬರಲಾಗುತ್ತಿದೆ. ಅದರಂತೆ ಆಗಷ್ಟ್ 31 ರಂದು ಆಚರಿಸುತ್ತಿರುವ ಗಣೇಶೋತ್ಸವ ಹಬ್ಬದ ಸಂದರ್ಭದಲ್ಲಿ ಭಕ್ತಾಧಿಗಳಿಂದ ಈಡುಗಾಯಿಗಳನ್ನು ಹೊಡೆಯುವ ಪದ್ಧತಿಯಿದೆ.
ಅದರಂತೆ ಈಡುಗಾಯಿಗಳನ್ನು ದೇವರಿಗೆ ಸಮರ್ಪಿಸಿದ ನಂತರದ ಈಡುಗಾಯಿಗಳನ್ನು ದೇವಾಲಯದ ವತಿಯಿಂದ ಸಾರ್ವಜನಿಕರ ಸಮ್ಮುಖದಲ್ಲಿ ಆಸಕ್ತ ಬಿಡ್ಡುದಾರರಿಂದ ಬಹಿರಂಗ ಹರಾಜು ನಡೆಸಲಾಗುವುದು.
ಆದ್ದರಿಂದ ಕೋಟೆ ಶ್ರೀ ಗಣಪತಿ ದೇವಾಲಯದ ದೇವರ ಸನ್ನಿಧಿಯಲ್ಲಿ ಗಣೇಶೋತ್ಸವ ಹಬ್ಬದ ಮುಂಚಿತವಾಗಿ ಆಗಸ್ಟ್ 30 ರಂದು ಮಂಗಳವಾರ ಬೆಳಗ್ಗೆ 10 ಗಂಟೆಗೆ ಸರಿಯಾಗಿ ಸಾರ್ವಜನಿಕ ಆಸಕ್ತ ಬಿಡ್ಡುದಾರರು ಮುಂಗಡ ಠೇವಣಿ ಮೊತ್ತದೊಂದಿಗೆ ಷರತ್ತುಗಳೊಂದಿಗೆ ಈಡುಗಾಯಿ ಬಹಿರಂಗ ಹರಾಜಿನಲ್ಲಿ ಭಾಗವಹಿಸುವಂತೆ ಶ್ರೀ ಓಂಕಾರೇಶ್ವರ ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣಪ್ಪ ಅವರು ತಿಳಿಸಿದ್ದಾರೆ.
ಷರತ್ತುಗಳು, ಈಡುಗಾಯಿ ಬಹಿರಂಗ ಹರಾಜಿನಲ್ಲಿ ಭಾಗವಹಿಸುವ ಪ್ರತಿಯೊಬ್ಬ ಆಸಕ್ತ ಬಿಡ್ಡುದಾರರು 10 ಸಾವಿರ ರೂ ಗಳ ಮೊತ್ತದ ಮುಂಗಡ ಠೇವಣಿ ಹಣವನ್ನು ‘ಕಾರ್ಯನಿರ್ವಾಹಕ ಅಧಿಕಾರಿ, ಶ್ರೀ ಓಂಕಾರೇಶ್ವರ ದೇವಾಲಯ, ಮಡಿಕೇರಿ’. EXECUETIVE OFFICER, SRI OMKARESHWARA TEMPLE, MADIKERI ಇವರ ಹೆಸರಿನಲ್ಲಿ ಬ್ಯಾಂಕಿನಲ್ಲಿ ಡಿ.ಡಿ. ಮುಖಾಂತರ ಪಡೆದು, ಹಾಜರುಪಡಿಸಿ ಹೆಸರು ಮತ್ತು ವಿಳಾಸವನ್ನು ಹಾಗೂ ಮೊಬೈಲ್ ಸಂಖ್ಯೆಯನ್ನು ನಮೂದಿಸಬೇಕು. ಹಿಂದಿನ ವರ್ಷದ (2021) ಬಿಡ್ಡು ಮೊತ್ತ 85 ಸಾವಿರ ರೂ ಗಳ ಮೊತ್ತವಿದ್ದು, 85 ಸಾವಿರ ರೂ ಗಳ ಮೊತ್ತದಿಂದಲೇ ಬಿಡ್ಡನ್ನು ಪ್ರಾರಂಭಿಸಲಾಗುವುದು.
ಪ್ರತಿ ಬಿಡ್ಡು ಮೊತ್ತವು ರೂ 500 ಗಳ ಮೊತ್ತದಿಂದ ಪ್ರಾರಂಭಿಸತಕ್ಕದ್ದು, ಅದಕ್ಕಿಂತ ಕಡಿಮೆ ಮೊತ್ತವನ್ನು ಕೂಗತಕ್ಕದ್ದಲ್ಲ. ಹರಾಜು ಮುಂಗಡ ಠೇವಣಿಯ ಮೊತ್ತವನ್ನು ಪಾವತಿಸಿದವರನ್ನು ಹೊರತುಪಡಿಸಿ, ಅವರ ಬದಲಿಗೆ ಬೇರೆಯವರು ಹರಾಜಿನಲ್ಲಿ ಭಾಗವಹಿಸಲು ಅವಕಾಶವಿಲ್ಲ. ಯಶಸ್ವಿ ಬಿಡ್ಡುದಾರರು ಬಿಡ್ಡು ಮೊತ್ತವನ್ನು ಹರಾಜಿನ ದಿನದಂದು ಸಂಜೆ 04 ಗಂಟೆಯ ಒಳಗಾಗಿ ಡಿ.ಡಿ ಮೂಲಕವಾಗಲೀ ಅಥವಾ ನಗದಾಗಲೀ ತಂದು ‘ಕಾರ್ಯನಿರ್ವಾಹಕ ಅಧಿಕಾರಿ, ಶ್ರೀ ಓಂಕಾರೇಶ್ವರ ದೇವಾಲಯ, ಮಡಿಕೇರಿ’(EXECUETIVE OFFICER, SRI OMKARESHWARA TEMPLE, MADIKERI) ಇವರಿಗೆ ಪಾವತಿಸಬೇಕು. ಯಶಸ್ವಿ ಬಿಡ್ಡುದಾರರು ಒಂದು ವೇಳೆ ಹರಾಜು ಮೊತ್ತವನ್ನು ನಿಗದಿತ ಅವಧಿಯಲ್ಲಿ ಪಾವತಿಸಲು ವಿಫಲರಾದಲ್ಲಿ ಈಗಾಗಲೇ ಪಾವತಿಸಿರುವ ಮುಂಗಡ ಠೇವಣಿ ಹಣವನ್ನು ಮುಟ್ಟುಗೋಲು ಹಾಕಿಕೊಂಡು ಯಶಸ್ವಿ ಬಿಡ್ಡುದಾರರ ಹಕ್ಕನ್ನು ರದ್ದುಗೊಳಿಸಲಾಗುವುದು.
ಹರಾಜು ನಡೆದ ದಿನದಂದು ಯಶಸ್ವಿ ಬಿಡ್ಡುದಾರರಿಗೆ ಹರಾಜನ್ನು ಸ್ಥಿರೀಕರಿಸಿ ಆದೇಶ ನೀಡಲಾಗುವುದು. ನಂತರ ಉಳಿದ ಬಿಡ್ಡುದಾರರ ಹರಾಜು ಮುಂಗಡ ಠೇವಣಿ ಹಣವನ್ನು ಅಂದೇ ಮರುಪಾವತಿಸಲಾಗುವುದು. ಯಶಸ್ವಿ ಬಿಡ್ಡುದಾರರು ಈಡುಗಾಯಿಗಳನ್ನು ತಾವೇ ಸ್ವತ; ಪಡೆದು ವಾಹನದ ಮೂಲಕ ಸ್ವಂತ ಖರ್ಚಿನಲ್ಲಿ ಸಾಗಿಸಿಕೊಳ್ಳತಕ್ಕದು. ಹೆಚ್ಚಿನ ಮಾಹಿತಿಗಾಗಿ ಶ್ರೀ ಓಂಕಾರೇಶ್ವರ ದೇವಾಲಯದ ಸಿಬ್ಬಂದಿಗಳಾದ ಅಣ್ಣಪ್ಪ ಮೊ.ಸಂ.9902290302 ಮತ್ತು ಭರತ್ ಮೊ.ಸಂ.9535779669 ಇವರಿಂದ ಮಾಹಿತಿಯನ್ನು ಪಡೆಯಬಹುದು ಎಂದು ಶ್ರೀ ಓಂಕಾರೇಶ್ವರ ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣಪ್ಪ ಅವರು ತಿಳಿಸಿದ್ದಾರೆ.