fbpx

ಬಸ್‌ ಸಂಖ್ಯೆ ಹೆಚ್ಚಿಸಲು ಡಿಪ್ಪೋ ಬದಲಾವಣೆಗೆ ಮನವಿ

ಸೋಮವಾರಪೇಟೆ ಪಟ್ಟಣದಲ್ಲಿ ಸರ್ಕಾರಿ ಬಸ್ ನಿಲ್ದಾಣವನ್ನು ಹಾಸನ ವಿಭಾಗಕ್ಕೆ ಸೇರ್ಪಡಿಸಲು ಸಾರ್ವಜನಿಕರು ಅಗ್ರಹಿಸಿದ್ದು, ಈ ಸಂಬಂಧ ಮನವಿಯನ್ನು ಇಲಾಖೆಯ ವ್ಯವಸ್ಥಾಪಕ ನಿರ್ದೇಶಕ ಹಾಗು ಮುಖ್ಯ ಸಂಚಾರ ವ್ಯವಸ್ಥಾಪಕರಿಗೆ ಸಲ್ಲಿಸಲಾಗಿದೆ.

ತಾಲ್ಲೂಕು ವ್ಯಾಪ್ತಿಯಲ್ಲಿ ಪ್ರಸ್ತುತ 150 ಕಿಲೋಮೀಟರ್ ದೂರದಲ್ಲಿರುವ ಪುತ್ತೂರು ಡಿಪ್ಪೋಗೆ ಒಳಪಟ್ಟಿದ್ದು, ಇದರ ಬದಲಾಗಿ 73 ಕಿಲೋಮೀಟರ್ ದೂರದಲ್ಲಿರುವ ಹಾಸನ ಡಿಪ್ಪೋ ಗೆ ಸೇರ್ಪಡಿಸಿದಲ್ಲಿ ಮಂಗಳೂರು, ಧರ್ಮಸ್ಥಳ, ಸುಬ್ರಹ್ಮಣ್ಯ, ಮೂಡಬಿದ್ರೆ, ಉಡುಪಿ ಭಾಗಕ್ಕೆ ತೆರಳುವ ಪ್ರಯಾಣಿಕರ ಅನುಕೂಲಕ್ಕೆ ಸಲುವಾಗಿ ಬಸ್ಸಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯಿದೆ.

ಈ ಹಿನ್ನಲೆ ಬೆರಳೆಣಿಕೆ ಬಸ್ ಸೌಕರ್ಯ ಇರುವ ಮಡಿಕೇರಿ ಡಿಪ್ಪೋ ಬದಲು ಹಾಸನ ಸೂಕ್ತವಾಗಿದ್ದು, ನೇರ ಬಸ್ ಸೌಲಭ್ಯ ಸೇವೆ ಲಭ್ಯವಾಗಲಿದೆ. ಈ ಹಿನ್ನಲೆಯಲ್ಲಿ ಸೂಕ್ತ ಕ್ರಮ ಕೈಗೊಳ್ಳುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ.

error: Content is protected !!