ಬಲೆಗೆ ಬಿದ್ದ ವ್ಯಾಘ್ರ

ಕೊಡಗು: ರೈತರ ಜಮೀನಿಗೆ ನುಗ್ಗಿ ಫಸಲು ನಾಶ ಮಾಡುತ್ತಿದ್ದ ಕಾಡು ಹಂದಿಯ ಉಪಟಳ ತಡೆಯಲು ಹಾಕಲಾಗಿದ್ದ ಬಲೆಗೆ ಹುಲಿಯೊಂದು ಸಿಲುಕಿಕೊಂಡಿರುವ ಘಟನೆ ವಿರಾಜಪೇಟೆ ತಾಲ್ಲೂಕಿನ ಬಾಳೆಲೆ ಗ್ರಾಮದಲ್ಲಿ ನಡೆದಿದೆ.

ಇಲ್ಲಿನ ಪಶುವೈದಕೀಯ ಆಸ್ಪತ್ರೆಯ ಹಿಂಬಾಗದಲ್ಲಿ ಇರಿಸಲಾಗಿದ್ದ ಬಲೆಗೆ ತಡರಾತ್ರಿ ಬೇಟೆ ಅರಸಿ ಗ್ರಾಮದತ್ತ ನುಸುಳುತ್ತಿದ್ದ ಹುಲಿ ಬಲೆಗೆ ಬಿದ್ದಿದ್ದು,ಹಂದಿಯ ಬದಲು ಜಾನುವಾರುಗಳ ಮೇಲೆ ನಿರಂತರ ದಾಳಿ ಮಾಡುತ್ತಿದ್ದ ಹುಲಿ ಬಿದ್ದಿರುವುದು ಗ್ರಾಮಸ್ಥರಲ್ಲಿ ಸಂತಸ ಮೂಡಿಸಿದೆ.ಸುತ್ತಮುತ್ತ ಗ್ರಾಮಗಳಲ್ಲಿ ಜಾನುವಾರುಗಳು ಬಲಿಯಾಗುತ್ತಿರುವ ಬಗ್ಗೆ ಅರಣ್ಯ ಇಲಾಖೆಗೆ ಮಾಹಿತಿ ನೀಡಿದರೂ ಪ್ರಯೋಜನವಾಗಿರಲಿಲ್ಲ,ಇದೀಗ ಗ್ರಾಮಸ್ಥರೇ ವನ್ಯಜೀವಿ ಉಪಟಳಕ್ಕೆ ಹಾಕಲಾಗಿದ್ದ ಬಲೆಗೆ ಹುಲಿ ಬಿದ್ದಿದೆ. ಸ್ಥಳಕ್ಕೆ ಅರಣ್ಯಾಧಿಕಾರಿಗಳು ಭೇಟಿ ನೀಡಿ ಹುಲಿಯನ್ನು ರಕ್ಷಿಸಿ ಸೂಕ್ತ ಸ್ಥಳಕ್ಕೆ ಬಿಡುವ ಕೆಲಸ ಮಾಡಿದ್ದಾರೆ.

error: Content is protected !!