ಬಲಿದಾನ ದಿವಸ್ ಶಾಂತಿಪೂಜೆಯಲ್ಲಿ ಪಾಲ್ಗೊಂಡ ಹಿಂದೂ ಸಂಘಟನೆ ಕಾರ್ಯಕರ್ತರು

ಸಿದ್ಧಾಪುರ ನಗರದಲ್ಲಿ ಬಿಗಿ ಪೋಲಿಸ್ ಬಂದೋಬಸ್ತ್ ನಡುವೆಯೂ ಸಿದ್ಧಾಪುರ ಅಯ್ಯಪ್ಪ ದೇವಾಲಯದಲ್ಲಿ ವರ್ಷ ಪ್ರತಿ ವಿವಿಧ ಹಿಂದೂ ಸಂಘಟನೆಗಳ ವತಿಯಿಂದ ನಡೆಸುವ ಕುಟ್ಟಪ್ಪ ಬಲಿದಾನ್ ದಿವಸ್ ನ ಶಾಂತಿಪೂಜೆ ಇಂದು ಬೆಳಗ್ಗೆ ವಿವಿಧ ಹಿಂದೂ ಸಂಘಟನೆ ಕಾರ್ಯಕರ್ತರು, ಪಕ್ಷದ ಕಾರ್ಯಕರ್ತರ ಸಮ್ಮುಖದಲ್ಲಿ ನಡೆಯಿತು.

ಕಾರ್ಯಕರ್ತರು ಭಾರತಮಾತೆಗೆ ಜೈಕಾರ ಹಾಕಿದ ಸಂಧರ್ಭದಲ್ಲಿ ಪೋಲೀಸರು ಮಡಿಕೇರಿಯಿಂದ ಸರ್ಕಲ್ ಇನ್ಸ್ಪೆಕ್ಟರ್ ಮತ್ತು ಪೋಲಿಸ್ ತುಕಡಿ ಆಗಮಿಸುತ್ತಿದ್ದು ಅರೆಸ್ಟ್ ಮಾಡುತ್ತೇವೆ ಅಂಥ ಹೇಳಿದಾಗ ವಿರಾಜಪೇಟೆ ತಾಲ್ಲೂಕು ಬಜರಂಗದಳದ ಮಾಜಿ ಸಹಸಂಚಾಲಕ ಹಾಗೂ ಬಿಜೆಪಿ ಸಿದ್ಧಾಪುರ ಶಕ್ತಿ ಕೇಂದ್ರದ ಹಾಲಿ ಅಧ್ಯಕ್ಷರೂ ಆದ ಪ್ರವೀಣ್ ಸಿದ್ಧಾಪುರ ಮತ್ತು ಪೋಲಿಸರಿಗೆ ಮಾತಿನ ಚಕಮಕಿ ನಡೆಯಿತು.ನಂತರ ಶಾಂತಿಯುತವಾಗಿ ಪೂಜೆ ಸಲ್ಲಿಸಿ ಕಾರ್ಯಕರ್ತರು ದೇವಾಲಯದಿಂದ ನಿರ್ಗಮಿಸಿದರು

error: Content is protected !!