ಬಣ್ಣದ ಲೋಕದಲ್ಲಿ ಮಿಂಚುತ್ತಿರೋ ಮಾದಕ ಮದನಾರಿ…

ಮೂಲತಃ ದಿಶಾ ಅವರ ಹೆಸರು ನಾಪಂಡ ಭವ್ಯ ಪೂವಯ್ಯ ಎಂದಿತ್ತು. ಆದರೆ ಸಿನಿ ಲೋಕಕ್ಕೆ ಕಾಲಿಟ್ಟ ಮೇಲೆ ಅದನ್ನು ನಾಪಂಡ ದಿಶಾ ಪೂವಯ್ಯ ಎಂದು ಮಾಡಿಕೊಂಡರು. ಎಮ್. ಎಸ್ ರಾಮಯ್ಯ ಕಾಲೇಜಿನಲ್ಲಿ ಸಿವಿಲ್ ಇಂಜಿನಿಯರಿಂಗ್ ಮಾಡುತ್ತಿರುವಾಗ, ಆಡಿಷನ್ ಒಂದರಲ್ಲಿ ಆಯ್ಕೆಯಾಗಿ ಕಲ್ಯಾಣ್ ಜುವೆಲರ್ಸ್ ಜಾಹಿರಾತಿನಲ್ಲಿ ಮೊದಲು ನಟಿಸಿದರು.

‘ಹುಡುಗರು’ ಸಿನಿಮಾದಲ್ಲಿ ವಿಶೇಷ ಪಾತ್ರವೊಂದರಲ್ಲಿ ನಟಿಸಿದರು. ಅಗಮ್ಯ ಸಿನಿಮಾದ ಮೂಲಕ ಪೂರ್ಣ ಪ್ರಮಾಣದ ನಟಿಯಾಗಿ ನಟಿಸಲು ಹೊರಟರು. ಪೊಲೀಸ್ ಸ್ಟೋರಿ 3, ಆಶಿರ್ವಾದ, ಸ್ಲಂ, ಮಲ್ಲಿ, ಶ್ರೀ ಸಾಯಿ, ದನಿಕ್ಲೆನ ಜೋಕ್ಲು(ತುಳು), birth, ರಿಯಲ್ ಪೊಲೀಸ್, ಅನ್ವೇಶಿ, ಶಿವಪಾರು ಸಿನಿಮಾಗಳಲ್ಲಿ ನಟಿಸಿದರು. ಒಕಟೆ ಲೈಫ್ ಎಂಬ ತೆಲಗು ಸಿನಿಮಾದಲ್ಲೂ ನಟಿಸಿದರು. ಸಾಲಿಗ್ರಾಮ, ಟರ್ನಿಂಗ್ ಪಾಯಿಂಟ್ ಸಿನಿಮಾದಲ್ಲೂ ನಟಿಸಿದ್ದಾರೆ.ಅವೆರಡೂ ಸಿನಿಮಾ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿ ಇದೆ. ಗಧಾಯುದ್ಧ ಹಾಗು ವರ್ಮ ಸಿನಿಮಾ ಇನ್ನೂ ಚಿತ್ರೀಕರಣದ ಹಂತದಲ್ಲಿ ಇದೆ.

ಸಿವಿಲ್ ಇಂಜಿನಿಯರಿಂಗ್ ಮುಗಿಸಿರುವ ದಿಶಾ ಅವರು ಮುಂದೆ ಇಂಟಿರಿಯರ್ ಡಿಸೈನಿಂಗ್ ಕೋಸ್೯ ಮಾಡಬೇಕೆಂದುಕೊಂಡಿದ್ದಾರೆ. ಕೊಡಗಿನ ಮುಕ್ಕೊಡ್ಲು ಗ್ರಾಮದವರಾದ ಇವರು ವಿದ್ಯಾಭ್ಯಾಸವನ್ನು ಮೈಸೂರು ಹಾಗು ಬೆಂಗಳೂರಿನಲ್ಲಿ ಮುಗಿಸಿದ್ದರು.

ನಟಿಸುತ್ತಾರೆ ಎಂಬ ಯಾವ ನಿರೀಕ್ಷಯೂ ಇಲ್ಲದೆಯೇ ಸಿನಿ ರಂಗದಲ್ಲಿ ಇಷ್ಟು ಪ್ರಯತ್ನಗಳನ್ನು ಪಟ್ಟು ಈ ಮಟ್ಟಕ್ಕೆ ತಲುಪಿದ್ದಾರೆ. ‘ಒಂದು ದಿನ, ಒಂದು ಕ್ಷಣ’ ಸಿನಿಮಾದಲ್ಲಿ ಸಾವಾಲೆಸೆವ ಒಂದು ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಅದು ಜನ ಮನ ಸೆಳೆಯುವ ನಂಬಿಕೆ ಕೂಡ ವ್ಯಕ್ತ ಪಡಿಸುತ್ತಾರೆ. ‘ ಹೆಣ್ಣು ಗಂಡಿನಷ್ಟೇ ಕಾರ್ಯ ಕ್ಷಮತೆಯನ್ನು ಹೊಂದಿದ್ದಾಳೆ. ಹೆಣ್ಣಿಗೂ ಶಿಸ್ತು, ತಲ್ಲೀಣತೆ ಇದ್ದರೆ ಅವಳೂ ಯಾರಿಗೂ ಕಡಿಮೆ ಇಲ್ಲದಂತೆ ಕೆಲಸ ಮಾಡಬಲ್ಲಳು’ ಎನ್ನುತ್ತಾರೆ.

ಗ್ಲಾಮರಸ್ ಪಾತ್ರಗಳಲ್ಲಿ ಮಾದಕವಾಗಿ ನಟಿಸಿರುವ ದಿಶಾ ಪೂವಯ್ಯ ಅವರ ಸಿನಿಮಾದಲ್ಲಿನ ನಟನೆ ರೋಮಾಂಚನ ಉಂಟು ಮಾಡುತ್ತವೆ. ಅವರ ಮುಂದಿನ ಭವಿತವ್ಯದಲ್ಲಿ ದೊಡ್ಡ ಬ್ಯಾನರ್ ಅಡಿಯಲ್ಲಿ ಸ್ಟಾರ್ ನಟರೊಂದಿಗೆ ಅಭಿನಯಿಸುವ ಸುವರ್ಣಾವಕಾಶಗಳು ದೊರೆಯುವಂತಾಗಲಿ ಎಂದು ಸುದ್ದಿ ಸಂತೆ ತಂಡ ಹಾರೈಸುತ್ತದೆ.
