fbpx

ಬಡಾವಣೆಗೆ ಸ್ವತಂತ್ರ್ಯ ಹೋರಾಟಗಾರನ  ಹೆಸರು ಅಧಿಕೃತ ಅಂಗೀಕಾರ

ಮಡಿಕೇರಿ: ಕೊಡಗಿನಲ್ಲಿ ಎರಡು ವರ್ಷಗಳ ಹಿಂದೆ ಸಂಭವಿಸಿದ್ದ ಪ್ರಕೃತಿ ವಿಕೋಪದಿಂದಾಗಿ ಭಾರೀ ನಷ್ಟ ಸಂಭವಿಸಿತ್ತು. ಹಲವಾರು ಕುಟುಂಬಗಳು ತಮ್ಮ ನೆಲೆಗಳನ್ನು ಕಳೆದುಕೊಂಡಿದ್ದರು.

ಈಗ ಅವರಿಗೆಲ್ಲಾ ಮನೆಗಳನ್ನು ನಿರ್ಮಿಸಿ ಪುನರ್ವಸತಿ ಕಲ್ಪಿಸಲಾಗಿದೆ. ಬಡಾವಣೆ ಹೆಸರನ್ನು ಕೂಡ ಅಧಿಕೃತವಾಗಿ ಇಟ್ಟಿದ್ದಾರೆ. ಡಿಟೇಲಿಗೆ ಓದು ಮುಂದುವರೆಸಿ…

ಎರಡು ವರ್ಷಗಳ ಹಿಂದಷ್ಟೆ ಕೊಡಗಿನಾದ್ಯಂತ ನಡೆದ ಪ್ರಕೃತಿ ವಿಕೋಪದಲ್ಲಿ ಮದೆ, ಕಾಟಕೇರಿ, ಸೆಕಂಡ್ ಮೊಣ್ಣಂಗೇರಿ, ಜೋಡುಪಾಲ ಮತ್ತು ಮಡಿಕೇರಿಯಲ್ಲಿ ಮನೆ ಕಳೆದು ಕೊಂಡವರಿಗೆ ಮದೆ ಗ್ರಾಮದ ಗೋಳಿಕಟ್ಟೆ ಸಮೀಪ ೮೦ ಮನೆಗಳನ್ನು ನಿರ್ಮಿಸಲಾಗಿದ್ದು, ಸಂತ್ರಸ್ತರಿಗೆ ವಿತರಿಸಲಾಗಿದೆ

ಈ ಬಡಾವಣೆಗೆ ಸ್ವಾತಂತ್ರ ವೀರ ಹೋರಾಟಗಾರ ಸುಬೇದಾರ್ ಗುಡ್ಡೇಮನೆ ಅಪ್ಪಯ್ಯ ಗೌಡ ಎಂದು ನಾಮಕರಣ ಮಾಡಲಾಗಿದೆ. ಬಡಾವಣೆಯ ಹೆಸರು ಮದೆ ಪಂಚಾಯತಿ ವತಿಯಿಂದ ಅಧಿಕೃತವಾಗಿ ಅಂಗೀಕಾರವಾಗಿದೆ.

error: Content is protected !!