ಫೆ.25 ರಂದು ಅರೆಭಾಷೆ ಸಂಸ್ಕøತಿ ಶಿಬಿರ

ಕರ್ನಾಟಕ ಅರೆಭಾಷೆ ಸಂಸ್ಕøತಿ ಮತ್ತು ಸಾಹಿತ್ಯ ಅಕಾಡೆಮಿ, ಗೋಣಿಕೊಪ್ಪ ಕೈಕೇರಿ ಸಮೃದ್ಧಿ ಅರೆಭಾಷಿಕ ಗೌಡ ಬಾಂಧವರ ಸಮಿತಿ ವತಿಯಿಂದ ಅರೆಭಾಷೆ ಸಂಸ್ಕøತಿ ಶಿಬಿರದ ಉದ್ಘಾಟನಾ ಕಾರ್ಯಕ್ರಮವು ಫೆಬ್ರವರಿ, 25 ರಂದು ಬೆಳಗ್ಗೆ 10 ಗಂಟೆಗೆ ಪಡಿಕ್ಕಲ್ ಐನ್‍ಮನೆಯಲ್ಲಿ ನಡೆಯಲಿದೆ.
ನಿವೃತ್ತ ತೆರಿಗೆ ಅಧಿಕಾರಿ ಪಡಿಕ್ಕಲ್ ಚಂಗಪ್ಪ, ಕರ್ನಾಟಕ ಅರೆಭಾಷೆ ಸಂಸ್ಕøತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾದ ಲಕ್ಷ್ಮೀನಾರಾಯಣ ಕಜೆಗದ್ದೆ, ಕೈಕೇರಿ ಭಗವತಿ ದೇವಸ್ಥಾನದ ಅರ್ಚಕರಾದ ಗುರುರಾಜ ರಾವ್, ನಿವೃತ್ತ ಮುಖ್ಯೋಪಾಧ್ಯಾಯರಾದ ತೆಕ್ಕಡೆ ಶಾಂತಿ ಲಕ್ಷ್ಮಣ ಇತರರು ಪಾಲ್ಗೊಳ್ಳಲಿದ್ದಾರೆ.

ಫೆಬ್ರವರಿ, 27 ರಂದು ಮಧ್ಯಾಹ್ನ 2 ಗಂಟೆಗೆ ಪಡಿಕ್ಕಲ್ ಐನ್‍ಮನೆಯಲ್ಲಿ ಸಮಾರೋಪ ಸಮಾರಂಭ ನಡೆಯಲಿದೆ. ಕರ್ನಾಟಕ ಅರೆಭಾಷೆ ಸಂಸ್ಕøತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾದ ಲಕ್ಷ್ಮೀನಾರಾಯಣ ಕಜೆಗದ್ದೆ, ಜಿಲ್ಲಾ ಚೇಂಬರ್ ಆಫ್ ಕಾಮರ್ಸ್‍ನ ಮಾಜಿ ಅಧ್ಯಕ್ಷರು ಮತ್ತು ಗೋಣಿಕೊಪ್ಪ ಗ್ರಾ.ಪಂ. ಸದಸ್ಯರಾದ ಬಿ.ಎನ್.ಪ್ರಕಾಶ್, ನಿವೃತ್ತ ಕಮಾಂಡೆಂಟ್ ಕರ್ತಿಕೊಲ್ಲಿ ಗಣೇಶ್ ಇತರರು ಭಾಗವಹಿಸಲಿದ್ದಾರೆ.

error: Content is protected !!