ಫಲಾನುಭವಿಗಳಿಗೆ ಶಾಸಕರಿಂದ ಹಸು ವಿತರಣೆ

ಕೊಡಗು: ಸೋಮವಾರಪೇಟೆ ತಾಲ್ಲೂಕಿನ ಪಶುಪಾಲನಾ ಮತ್ತು ಪಶುವೈದ್ಯಕೀಯ ಇಲಾಖೆಯ ವತಿಯಿಂದ ಅಮೃತ ಸಿರಿ ಯೋಜನೆಯಡಿಯಲ್ಲಿ ತಾಲ್ಲೂಕಿನ 15 ಮಂದಿ ಮಹಿಳಾ ಫಲಾನುಭವಿಗಳಿಗೆ ಕೂಡಿಗೆ ಜರ್ಸಿ ತಳಿ ಸಂವರ್ಧಕ ಕೇಂದ್ರದಲ್ಲಿ ಶಾಸಕ ಅಪಚ್ಚು ರಂಜನ್ ಹಸುಗಳ ವಿತರಣೆ ಮಾಡಿದರು.

ಹಸುಗಳ ಸಾಕಾಣಿಕೆಯಿಂದ ಸ್ವಾವಲಂಭಿಯಾಗಿ ಬದುಕುವ ಜೊತೆಗೆ ಅಮೃತ ಸಿರಿ ಯೋಜನೆಯ ಸೌಲಭ್ಯ ಸದ್ಬಳಕೆ ಮಾಡಿಕೊಳ್ಳುವಂತೆ ಕರೆ ನೀಡಿದರು.