fbpx

ಪ್ಲಾಸ್ಟಿಕ್ ಬಾಟಲಿಯಲ್ಲಿ ನೀರು ಕುಡಿಯುವ ಮುನ್ನ ಎಚ್ಚರ!

ಸಾಕಷ್ಟು ಜನರು ಪ್ರಯಾಣದ ವೇಳೆ ಅಂಗಡಿಯಲ್ಲಿ ದೊರೆಯುವ ಪ್ಲಾಸ್ಟಿಕ್ ನೀರಿನ ಬಾಟಲಿಗಳನ್ನು ಖರೀದಿಸಿ ಆಯಾಸ ನೀಗಿಸಿಕೊಳ್ಳುತ್ತಾರೆ. ನಂತರ ಅದೇ ಬಾಟಲಿಯನ್ನು ಮತ್ತೆ ಬಳಸಿಕೊಂಡು ನೀರು ಕುಡಿಯುತ್ತಾರೆ. ಆದರೆ ಆ ಬಾಟಲಿಗಳನ್ನು ಮತ್ತೆ ಬಳಸುವುದು ಎಷ್ಟು ಡೇಂಜರಸ್ ಗೊತ್ತಾ?

ಒಮ್ಮೆ ಬಳಸಿದ ಪ್ಲಾಸ್ಟಿಕ್ ಬಾಟಲಿಗಳಲ್ಲಿ ಮತ್ತೆ ಬಳಸುವುದರಿಂದ ಆರೋಗ್ಯದ ಮೇಲೆ ಪರಿಣಾಮ ಬೀಳುವುದರಲ್ಲಿ ಎರಡು ಮಾತಿಲ್ಲ.

ಪ್ಲಾಸ್ಟಿಕ್ ಬಾಟಲಿಯನ್ನು ಯಾಕೆ ಬಳಸಬಾರದು ಗೊತ್ತಾ?

ವಿಶೇಷವಾಗಿ ಅಂಗಡಿಗಳಲ್ಲಿ ಸಿಗುವ ಪ್ಲಾಸ್ಟಿಕ್ ಬಾಟಲಿಗಳಲ್ಲಿ ಅಂಟಿಸಿರುವ ಸ್ಟಿಕರ್ಸ್ಗಳ ಮೇಲೆ ಒಮ್ಮೆ ಕಣ್ಣು ಹಾಯಿಸಿನೋಡಿ. ತ್ರಿಕೋನಾಕರಾದ ಗುರುತಿನ ನಡುವೆ ಇಲ್ಲವೆ ಅಕ್ಕ ಪಕ್ಕದಲ್ಲಿ PET, PC, PP, PETE, PVC, HDPE, HDP, LDPE ಎಂದು ಬರೆದಿರಲಾಗುತ್ತದೆ.

PET, PC, PP, PETE, PVC, HDPE, HDP, LDPE ಈ ಪದಗಳು ಏನು ಹೇಳುತ್ತಿವೆ ಗೊತ್ತಾ?

ಹೆಚ್ಚಿನ ಪ್ಲಾಸ್ಟಿಕ್ ಬಾಟಲಿಗಳ ಮೇಲೆ PET, PC, PP, PETE, PVC, HDPE, HDP, LDPE ಬರೆದಿರುತ್ತವೆ. ಈ ಪದ ನೀವು ಬಳಸುತ್ತಿರುವ ಪ್ಲಾಸ್ಟಿಕ್ ಬಾಟಲಿಯ ಗುಣಮಟ್ಟವನ್ನು ಹೇಳುತ್ತದೆ. ಅಂದರೆ ಈ ಪ್ಲಾಸ್ಟಿಕ್ ಬಾಟಲಿಯು ಬಳಕೆಗೆ ಯೋಗ್ಯವೇ? ಎಂಬುದನ್ನು ತಿಳಿಸುತ್ತದೆ.

ನೀರಿನ ಬಾಟಲಿಯ ಬುಡದಲ್ಲಿ PET ಅಥವಾ PETE ಬರೆದುಕೊಂಡಿದ್ದರೆ ಎಚ್ಚರ. ಏಕೆಂದರೆ ಅಂತಹ ಬಾಟಲಿಗೆ ನೀರು ಹಾಕಿ ಬಳಸಿದರೆ ಅದರಲ್ಲಿ ವಿಷ ಪದಾರ್ಥ ಬಿಡುಗಡೆಯಾಗುತ್ತದೆ. ಆದ್ದರಿಂದ ಇಂತಹ ಬಾಟಲಿಗಳ ನೀರು ಕುಡಿಯುವುದು ಸುರಕ್ಷಿತವಲ್ಲ.

ಇನ್ನು ಕೆಲ ಬಾಟಲಿಗಳ ಮೇಲೆ PC ಎಂದು ಬರೆದುಕೊಂಡಿರುತ್ತದೆ. ಇಂತಹ ಬಾಟಲಿಗಳು ತುಂಬಾ ಅಪಾಯಕಾರಿ. ಇಂತಹ ಬಾಟಲಿಗಳನ್ನು ಬಳಸಲೇ ಬಾರದು.

PS ಎಂದು ಬರೆದುಕೊಂಡಿರುವ ಪ್ಲಾಸ್ಟಿಕ್‌ ಅನ್ನು ಮಗ್‌ಗಳನ್ನು ತಯಾರಿಸಲು ಬಳಸುತ್ತಾರೆ. ಇಂತಹ ಮಗ್‌ಗಳಲ್ಲಿ ಕಾಫಿ, ಟೀ, ಹಾಲಿನಂಥ ಬಿಸಿ ಪದಾರ್ಥಗಳನ್ನು ಹಾಕಿದರೆ ಅವು ಕಾರ್ಸಿನೋಜೆನಿಕ್ ಅನ್ನು ಬಿಡುಗಡೆ ಮಾಡುತ್ತವೆ.

PVC ಅಥವಾ 3V ಎಂದು ಬರೆದಿದ್ದರೆ ಅದು ಅಪಾಯಕಾರಿ ಪ್ಲಾಸ್ಟಿಕ್. ಇಂಥ ಪ್ಲಾಸ್ಟಿಕ್ ಬಳಕೆ ಹಾರ್ಮೋನ್​ಗಳ ಅಸಮತೋಲನಕ್ಕೆ ದಾರಿಯಾಗಲಿದೆ. ಕೆಲವು ಪ್ಲಾಸ್ಟಿಕ್‌ಗಳು ಕ್ಯಾನ್ಸರ್ ಕಾರಕ ಎಂದು ಹೇಳಲಾಗುತ್ತಿದೆ.

ಹಾಗೆಂದು ಎಲ್ಲಾ ಪ್ಲಾಸ್ಟಿಕ್ ಬಾಟಲಿಗಳು ಅಪಾಯಕಾರಿಯಲ್ಲ. ಕೆಲ ಬಾಟಲಿಗಳ ಮೇಲೆ PP, HDPE, HDP LDPE ಸೇರಿವೆ. ಟಾನಿಕ್, ಔಷಧಿಗಳನ್ನು ಹಾಕಲು PP ಪ್ಲಾಸ್ಟಿಕ್ಟ್​ಗಳನ್ನ ಬಳಸಲಾಗುತ್ತದೆಯಂತೆ.

ಇನ್ನು HDPE ಅಥವಾ HDP ಎಂದು ಬರೆದಿದ್ದರೆ ಅವು ಬಳಸಲು ಯೋಗ್ಯ. ಇಂತಹ ಬಾಟಲಿಗಳನ್ನು ನೀರು ಕುಡಿಯಲು ಬಳಸಿದರೆ ಅಪಾಯವೇನಿಲ್ಲ.

ಅಂತೆಯೇ LDPE ಎಂದು ಬರೆದಿರುವ ಪ್ಲಾಸ್ಟಿಕ್ ಬಾಟಲಿಗಳನ್ನು ಬಳಸಿದರು ಯಾವುದೇ ಅಪಾಯವಿಲ್ಲ.

error: Content is protected !!