fbpx

ಪ್ರೇಮ ಪ್ರಕರಣದಿಂದಾಗಿ ಯುವತಿ ಆತ್ಮಹತ್ಯೆ

ಕುಶಾಲನಗರದ ಮುಳ್ಳುಸೋಗೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಮಾರುತಿ ಬಡಾವಣೆಯಲ್ಲಿ ಯುವತಿಯೊಬ್ಬಳು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಬಡಾವಣೆಯ ಕಾಂತರಾಜು ರವರ ಸಾಕು ಮಗಳು (ಪತ್ನಿ ಎಲಿಜಬೆತ್ ಸಹೋದರಿ ಪುತ್ರಿ) ಲ್ಯಾನ್ಸಿ (21) ಆತ್ಮಹತ್ಯೆಗೆ ಶರಣಾದವರು.

ಲ್ಯಾನ್ಸಿ ಮುಳ್ಳುಸೋಗೆ ಗ್ರಾಮ ಪಂಚಾಯತಿಯ ಅಧ್ಯಕ್ಷರಾದ ಚೆಲುವರಾಜು ಅವರ ಪುತ್ರ ಕುಮಾರ ಎಂಬಾತನನ್ನು ಪ್ರೀತಿಸುತ್ತಿದ್ದಳು. ಕುಮಾರ ಮದುವೆಯಾಗುವ ಭರವಸೆಯನ್ನೂ ನೀಡಿದ್ದ ಎನ್ನಲಾಗಿದೆ. ಆದರೆ ಮದುವೆಗೆ ವಿಳಂಬ ಮಾಡುತ್ತಿರುವ ಕಾರಣ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾಳೆ ಎಂದು ಡೆತ್ ನೋಟ್ ಬರೆದಿಟ್ಟು ಸಾವಿಗೆ ಶರಣಾಗಿದ್ದಾಳೆ.

ಇದೀಗ ಯುವಕ ಕುಮಾರನ ವಿರುದ್ಧ ಕ್ರಮ ಕೈಗೊಳ್ಳುವಂತೆ ಯುವತಿ ತಂದೆ ಕಾಂತರಾಜು ಕುಶಾಲನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

error: Content is protected !!