April 30, 2021

ಪ್ರಸಿದ್ಧ ಪತ್ರಕರ್ತ ರೋಹಿತ್ ಸರ್ದಾನಾ ನಿಧನ!

ದೆಹಲಿ: ಪ್ರಸಿದ್ಧ ಟಿವಿ ಪತ್ರಕರ್ತ ರೋಹಿತ್ ಸರ್ದಾನಾ ಅವರು ಕರೋನಾ ವೈರಸ್‌ನಿಂದ ಶುಕ್ರವಾರ ನಿಧನರಾದರು. ಝೀ ನ್ಯೂಸ್ ಪ್ರಧಾನ ಸಂಪಾದಕ ಸುಧೀರ್ ಚೌಧರಿ ಅವರು ರೋಹಿತ್ ಸಾರ್ದಾನಾ ಅವರ ಅಕಾಲಿಕ ನಿಧನದ ಸುದ್ದಿಯನ್ನ ಟ್ವೀಟ್ ಮೂಲಕ ತಿಳಿಸಿದ್ದಾರೆ.ಈ ಬಗ್ಗೆ ಸುಧೀರ್ ಚೌಧರಿ ಟ್ವೀಟ್ ಮಾಡಿ, “ಸ್ವಲ್ಪ ಸಮಯದ ಹಿಂದೆ ಜೀತೇಂದ್ರ ಶರ್ಮಾ ರವರ ಫೋನ್ ಬಂದಿತ್ತು.

ಅವರು ಹೇಳಿದ್ದನ್ನ ಕೇಳಿ ನಾನು ನಡುಗಲಾರಂಭಿಸಿದೆ. ಅದು ನಮ್ಮ ಮಿತ್ರ ಹಾಗು ಸಹೋದ್ಯೋಗಿ ರೋಹಿತ್ ಸಾರ್ದಾನಾ ಅವರ ಸಾವಿನ ಸುದ್ದಿಯಾಗಿತ್ತು. ಈ ವೈರಸ್ ನಮ್ಮ ಹತ್ತಿರದವರನ್ನ ಕೊಂಡೊಯ್ತುತ್ತದೆ ಅನ್ನೋದನ್ನ ನಾವು ಕಲ್ಪಿಸಿಕೊಳ್ಳಲೂ ಸಾಧ್ಯವಿಲ್ಲ. ಇದಕ್ಕಾಗಿ ನಾನು ಸಿದ್ಧನಿರಲಿಲ್ಲ. ದೇವರೇ ಇದು ಅನ್ಯಾಯ… ಓಂ ಶಾಂತಿ” ಎಂದು ಬರೆದಿದ್ದಾರೆ.
ಕರೋನಾ ಮತ್ತು ಹೃದಯಾಘಾತದಿಂದಾಗಿ ಅವರು ಜಗತ್ತನ್ನು ತೊರೆದಿದ್ದರೂ ಸಹ, ಒಂದು ದಿನದ ಮುಂಚೆಯೇ ಜನರಿಗೆ ಸಹಾಯ ಮಾಡಲು ಅವರು ಸಕ್ರಿಯರಾಗಿದ್ದರು. ರೆಮಿಡಿಸ್ವಿರ್ ಇಂಜೆಕ್ಷನ್, ಆಕ್ಸಿಜನ್, ಬೆಡ್ ಗಳು ಸೇರಿದಂತೆ ಕರೋನಾದಿಂದ ಬಳಲುತ್ತಿರುವ ಜನರ ಚಿಕಿತ್ಸೆಗಾಗಿ ಅವರು ಸೋಷಿಯಲ್ ಮೀಡಿಯಾದಲ್ಲಿ ನಿರಂತರವಾಗಿ ಸಕ್ರಿಯರಾಗಿದ್ದರು ಮತ್ತು ಸಹಕಾರಕ್ಕಾಗಿ ಜನರಿಗೆ ಮನವಿ ಮಾಡಿದರು. ಸಾವಿಗೆ ಒಂದು ದಿನ ಮೊದಲು ಏಪ್ರಿಲ್ 29 ರಂದು, ಅವರು ಟ್ವೀಟ್ ಮಾಡಿದ್ದರು ಮತ್ತು ರೆಮೆಡಿಸ್ವಿರ್ ಇಂಜೆಕ್ಷನ್‌ನ್ನ ವ್ಯವಸ್ಥೆ ಮಾಡುವಂತೆ ಮಹಿಳೆಗೆ ಮನವಿ ಮಾಡಿದ್ದರು. ಇದಕ್ಕೂ ಮೊದಲು ಏಪ್ರಿಲ್ 28 ರಂದು ಅವರು ಪ್ಲಾಸ್ಮಾ ದಾನ ಮಾಡುವಂತೆ ಜನರಿಗೆ ಮನವಿ ಮಾಡಿದರು.
ಮತ್ತೊಂದು ಟ್ವೀಟ್‌ನಲ್ಲಿ ರೋಹಿತ್ ಸರ್ದಾನಾ ಅವರನ್ನು ನೆನಪಿಸಿಕೊಂಡ ರಾಜ್‌ದೀಪ್ ಸರ್ದೇಸಾಯಿ, “ರೋಹಿತ್ ನನ್ನ ನಡುವೆ ರಾಜಕೀಯ ಭಿನ್ನಾಭಿಪ್ರಾಯಗಳನ್ನು ಹೊಂದಿದ್ದರು, ಆದರೆ ನಾವು ಯಾವಾಗಲೂ ಚರ್ಚೆಯನ್ನು ಆನಂದಿಸುತ್ತಿದ್ದೆವು. ನಾವು ಒಂದು ರಾತ್ರಿ ಶೋ ಮಾಡಿದ್ದೇವು, ಅದು ಬೆಳಗಿನ ಜಾವ 3 ಗಂಟೆಗೆ ಮುಗಿದಿತ್ತು. ಅದು ಮುಗಿದ ಮೇಲೆ ಅವರಯ, ‘ಮಜಾ ಆಗಯಾ ಬಾಸ್’ ಎಂದು ಹೇಳಿದ್ದರು. ಅವರು ಒಳ್ಳೆಯ ಆ್ಯಂಕರ್ ಪತ್ರಕರ್ತರಾಗಿದ್ದರು. ಭಗವಂತ ನಿಮ್ಮ ಆತ್ಮಕ್ಕೆ ಶಾಂತಿ ಕೊಡಲಿ ರೋಹಿತ್ ಸರ್ದಾನಾ’ ಎಂದು ಬರೆದಿದ್ದಾರೆ. ಸರ್ದೇಸಾಯಿ ಅವರಲ್ಲದೆ, ಕಾಂಗ್ರೆಸ್ ಹಿರಿಯ ಮುಖಂಡ ಗುಲಾಮ್ ನಬಿ ಆಜಾದ್ ಕೂಡ ರೋಹಿತ್ ಸರ್ದಾನಾಗೆ ಗೌರವ ಸಲ್ಲಿಸಿದ್ದಾರೆ.

ರೋಹಿತ್ ಸರ್ದಾನಾ Zee News ನಲ್ಲಿ ದೀರ್ಘಕಾಲದಿಂದ ಆ್ಯಂಕರ್ ಆಗಿ ಕೆಲಸ ಮಾಡಿದ್ದರು. 2017 ರಲ್ಲಿ ಅವರು ಆಜ್ ತಕ್ ನ್ಯೂಸ್ ಚಾನೆಲ್ ಗೆ ಹೋಗಿದ್ದ‌ರು‌. 2018 ರ ವರ್ಷದಲ್ಲಿಯೇ ರೋಹಿತ್ ಸರ್ದಾನಾಗೆ ಗಣೇಶ್ ಶಂಕರ್ ವಿದ್ಯಾಾರ್ಥಿ ಪ್ರಶಸ್ತಿಯಿಂದ ಪುರಸ್ಕರಿಸಲಾಗಿತ್ತು.

error: Content is protected !!