fbpx

ಪ್ರವೃತ್ತಿಯನ್ನೇ ವೃತ್ತಿ ಆಗಿಸಿಕೊಂಡ ಅಪೂರ್ವ ಬರಹಗಾರ: ಪೂಜಾರಿರ ಚಂದ್ರಜಿತ್ ಬೆಳ್ಳಿಯಪ್ಪ

ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನವರೇ ಆದ ಪೂಜಾರಿರ ಚಂದ್ರಜಿತ್ ಬೆಳ್ಳಿಯಪ್ಪ ಅವರು ತುಂಬು ಪ್ರತಿಭೆ ಇರುವ ನಿಪುಣ ಬರಹಗಾರ. ಈಗ ಪ್ರಸ್ತುತ ಪರಂವಾಹ ಸಂಸ್ಥೆಯಲ್ಲಿ ರಕ್ಷಿತ್ ಶೆಟ್ಟಿ ಅವರ ತಂಡದಲ್ಲಿ ಪ್ರಮುಖರಾಗಿ ಕೆಲಸ ಮಾಡುತ್ತಿದ್ದಾರೆ.


ಬಾಲ್ಯದಿಂದಲೇ ಬರಹದಲ್ಲಿ ಒಳ್ಳೆಯ ಕಸುವು ಇದ್ದಿದ್ದರಿಂದ ಸಿನಿ ರಂಗದಲ್ಲಿ ಏನಾದರೂ ಸಾಧನೆ ಮಾಡಬೇಕು ಎಂಬ ತುಡಿತವಿತ್ತು ಅವರಿಗೆ. ನಂತರ ಬೆಂಗಳೂರಿನ ವಿಶ್ವೇಶ್ವರಯ್ಯ ಕಾಲೇಜಿನಲ್ಲಿ Information Science ವಿಷಯದಲ್ಲಿ ,ಇಂಜಿನಿಯರಿಂಗ್ ಮಾಡಿದರು. ನಂತರ SAP Labsನಲ್ಲಿ ಉದ್ಯೋಗಕ್ಕೆ ಸೇರಿದರು. ಅದರೊಂದಿಗೆ ‘Passionophoria’ ಎಂಬ ಬ್ಲಾಗ್ನಲ್ಲಿ ಹವ್ಯಾಸಿ ಕಥೆಗಾರರಾಗಿ ಬರೆಯುತ್ತಿದ್ದರು. ಆ ಬರಹಗಳನ್ನು ರಕ್ಷಿತ್ ಶೆಟ್ಟಿ ಅವರಿಗೂ ಕಳುಹಿಸಿಕೊಟ್ಟಿದ್ದರು. ಅದನ್ನು ಓದಿ ಚಂದ್ರಜಿತ್ ಅವರ ಬರಹದ ಶಕ್ತಿಯನ್ನು ಗುರುತಿಸಿ, ತಮ್ಮ ತಂಡವನ್ನು ಸೇರಿಕೊಳ್ಳುವಂತೆ ಬುಲಾವ್ ನೀಡಿದರು.

ಆ ಬುಲಾವಿಗೆ ಸಕಾರಾತ್ಮಕವಾಗಿ ಸ್ಪಂದಿಸಿ ಇಂಜಿನಿಯರ್ ಕೆಲಸ ಬಿಟ್ಟು, ಅವರ ತಂಡಕ್ಕೆ ಸೇರಿಕೊಂಡರು. ಚಂದ್ರಜಿತ್ ಬೆಳ್ಳಿಯಪ್ಪ ಅವರು ಆ ತಂಡ ಸೇರಿದಾಗ, ಕಿರಿಕ್ ಪಾರ್ಟಿ ಸಿನಿಮಾ ಅರ್ಧದಷ್ಟು ಮುಗಿದು ಆಗಿತ್ತು. ಕಿರಿಕ್ ಪಾರ್ಟಿ ಸಿನಿಮಾ ಬಲು ವೇಗವಾಗಿ ಮುಗಿಯಿತು. ಸೂಪರ್ ಡೂಪರ್ ಹಿಟ್ ಕೂಡ ಆಯಿತು.

ನಂತರ ಶ್ರೀ ದೇವಿ ಎಂಟರ್ಟೇನರ್ಸ್ ಮತ್ತು ರಿಷಬ್ ಶೆಟ್ಟಿ ಫಿಲ್ಮ್ ಬ್ಯಾನರ್ ಅಡಿಯಲ್ಲಿ ಬಂದ ‘ಕಥಾ ಸಂಗಮ’ ಸಿನಿಮಾ ವಿಭಿನ್ನತೆ ಹಾಗು ವಿಶಿಷ್ಟತೆಯಿಂದ ಕೂಡಿತ್ತು. ಏಳು ಕಥಾ ಹಂದರಗಳಿದ್ದ ಸಿನಿಮಾವನ್ನು ಕಿರಣ್ ರಾಜ್ .ಕೆ, ಜಯಂತ್, ರಾಹುಲ್ ಪಿ.ಕೆ, ಜಮದಗ್ನಿ ಮನೋಜ್, ಕಿರಣ್ ಅನಂತ್, ಜಯಶಂಕರ್.ಎ, ಸೇರಿದಂತೆ ಚಂದ್ರಜಿತ್ ಬೆಳ್ಳಿಯಪ್ಪ ಒಟ್ಟು ಏಳು ಜನರು ಅವರವರ ಕಥೆಗಳನ್ನು ನಿರ್ದೇಶಿಸಿದ್ದರು.


ಕನ್ನಡದಲ್ಲಿ ಇದು ವಿನೂತನ ಪ್ರಯೋಗವಾಗಿತ್ತು. ಅದರಲ್ಲಿ ಒಂದು ಕಥೆಯನ್ನಷ್ಟೇ ನಿರ್ದೇಶಿಸಿದರೂ, ಅನುಭವ ಅಮೂಲ್ಯವಾಗಿತ್ತು. ಅದಾದ ಮೇಲೆ ಪುಶಷ್ಕರ್ ಫಿಲ್ಮ್ಸ್, ಶ್ರೀದೇವಿ ಎಂಟರ್ಟೇನರ್ಸ್, ಪರಂವಾಹ ಸ್ಟೂಡಿಯೋ ಅಡಿಯಲ್ಲಿ ದೊಡ್ಡ ಬಜೆಟ್ ಸಿನಿಮಾ ಆದ ‘ಅವನೇ ಶ್ರೀಮನ್ನಾಯಣ’ ಸಿನಿಮಾ ಸಚಿನ್ ರವಿ ಅವರ ನಿರ್ದೇಶನದಲ್ಲಿ ಪಂಚ ಭಾಷೆಗಳಲ್ಲಿ ಬಿಡುಗಡೆಯಾಯಿತು. ಈ ಸಿನಿಮಾದ ಸ್ಕ್ರಿಪ್ಟ್ ಕೆಲಸಕ್ಕೆ ರಕ್ಷಿತ್ ಶೆಟ್ಟಿ ಅವರೂ ಸೇರಿದಂತೆ ಚಂದ್ರಜಿತ್ ಬೆಳ್ಳಿಯಪ್ಪ ಅವರ ಜೊತೆ ಅದೇ “7odds” ತಂಡವಿತ್ತು. ಸಿನಿಮಾ ಕನ್ನಡ ಚಿತ್ರರಂಗದಲ್ಲಿ ಬಾರಿ ಸದ್ದು ಮಾಡಿ, ಭರ್ಜರಿ ಕಲೆಕ್ಷನ್ ಕೂಡ ಮಾಡಿತು. ನಿರೀಕ್ಷೆಯ ಮಟ್ಟ ತಲುಪದಿದ್ದರೂ, ಯಶಸ್ವಿಯಂತೂ ಆಯಿತು.

ಅಕ್ಕಂದಿರಾದ ಪುಷ್ಪಾಂಜಲಿ ಹಾಗು ಪೂರ್ಣಿಮಾ ಅವರಿಂದ ಪ್ರೇರಿತರಾದ ಬರವಣಿಗೆಯಲ್ಲಿ ಆಸಕ್ತಿ ಬಂದು, ಅದರಲ್ಲಿ ತೊಡಗಿದ ಚಂದ್ರಜಿತ್ ಅವರಿಗೆ ಬರವಣಿಗೆಯಲ್ಲಿಯೇ ಏನಾದರೂ ಸಾಧಿಸಲೇಬೇಕು ಎಂಬ ಹಠ ಬಂತು. ಬೆಳ್ಳಿಯಪ್ಪ ಹಾಗು ವೇದಾವತಿ ಅವರುಗಳ ಪುತ್ರರಾದ ಪೂಜಾರಿರ ಚಂದ್ರಜಿತ್ ಬೆಳ್ಳಿಯಪ್ಪ ಅವರಿಗೆ ಹೆತ್ತವರ ಪ್ರೋತ್ಸಾಹ ಸದಾ ಇತ್ತು. ಇಂಜಿನಿಯರ್ ಕೆಲಸ ಬಿಟ್ಟು ಸಹ ನಿರ್ದೇಶಕರಾಗಲು ಹೊರಟಾಗ ಹೆತ್ತವರು ಕೂಡ ಧೈರ್ಯದಲ್ಲಿ ಮುನ್ನಡಿ ಎಂದು ಹುರಿದುಂಬಿಸಿದರು.

ಈಗ ಸದ್ಯಕ್ಕೆ ‘ಉಳಿದವರು ಕಂಡಂತೆ’ ಸಿನಿಮಾದ ಸಿಕ್ವೆಲ್ ಸಿನಿಮಾ ‘ರಿಚ್ಚಿ’ ಎಂಬ ಸಿನಿಮಾಕ್ಕೆ ಚಂದ್ರಜಿತ್ ಬೆಳ್ಳಿಯಪ್ಪ ಅವರು ಬರಹಗಾರರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ರಿಚ್ಚಿ ಸಿನಿಮಾ ನಂತರ ಒಂದು ಸಿನಿಮಾಗೆ ತಾವೇ ಸ್ವತಂತ್ರವಾಗಿ ನಿರ್ದೇಶಕರಾಗುವ ಕನಸಿದೆ. ‘ಮಧ್ಯಮ ವರ್ಗದವರಾಗಿದ್ದರೂ ತಂದೆ ತಾಯಿ ವಿದ್ಯೆಗೆ ಯಾವ ಕೊರತೆಯೂ ಮಾಡಲಿಲ್ಲ. ಹಾಗಾಗಿ ಏನೂ ಕಷ್ಟವೆನಿಸಲಿಲ್ಲ. ಒಳ್ಳೆಯ ವಿದ್ಯಾಭ್ಯಾಸವೂ ಇದ್ದಿದ್ದರಿಂದ ಉದ್ಯೋಗವೂ ಉತ್ತಮವಾಗಿದ್ದೇ ದೊರೆಯಿತು ಎನ್ನುತ್ತಾರೆ ಚಂದ್ರಜಿತ್ ಬೆಳ್ಳಿಯಪ್ಪ.

ಯುವ ಜನರು ಒಳ್ಳೆಯ ಬರಹಗಾರರಾಗಬೇಕೆಂದರೆ ಏನು ಮಾಡಬೇಕು?
ನೋಡಿ ‘creative writing’ ತುಂಬಾ ಭಿನ್ನವಾಗಿ ನಿಲ್ಲುವಂತಹದ್ದು . ಬರಹಗಾರನಿಗೆ ಓದುವ ಹವ್ಯಾಸ ಇರಲೇಬೇಕು. ಓದುವ ಹವ್ಯಾಸದ ಜೊತೆಗೆ ಸಮಾಜದಲ್ಲಿನ ಆಗು ಹೋಗುಗಳ ಬಗ್ಗೆ ಅಗಾಧವಾದ ಗಮನಿಸುವಿಕೆ ಇರಬೇಕು. ಎಲ್ಲವನ್ನೂ ಸೂಕ್ಷ್ಮವಾಗಿ ಮನಸ್ಸಿನಲ್ಲೇ ವಿಶ್ಲೇಷಿಸುವ ಕಸುವು ಇರಬೇಕು. ನಮ್ಮದೇ ಬರಹವನ್ನು ನಾವೇ ಮುಂದಿನ ಹತ್ತು ವರ್ಷ ಕಳೆದಾದ ಮೇಲೆ ಕೂಡ ಅದನ್ನು ಓದಿದಾಗ ಕುಷಿಯಾಗಬೇಕು. ಅದೇ ಒಳ್ಳೆಯ ಬರಹ ಎನ್ನಿಸಿಕೊಳ್ಳುವುದು. ಬರಹಗಾರ ಆಗಲು ಪ್ರತಿ ದಿನವೂ ಅವನು ಬರೆಯುವ ಅಭ್ಯಾಸವನ್ನು ಇಟ್ಟುಕೊಳ್ಳಬೇಕು. ನಾನೂ ದಿನಕ್ಕೆ ಕನಿಷ್ಠ 15-20 ಪುಟ ಬರೆಯಬೇಕು. ಆ ಬರಹದ ಬಳಕೆ ಆದರೂ ಆಗದಿದ್ದರೂ ಬರೆಯುತ್ತಿರಬೇಕು. ಹಾಗೆ ಬರಹದ ಹವ್ಯಾಸ ಬೆಳೆಸಿಕೊಂಡವನಿಗೆ ಮಾತ್ರವೇ ಯಶಸ್ಸು ಕಟ್ಟಿಟ್ಟ ಬುತ್ತಿಯಾಗಿರುತ್ತದೆ ಎನ್ನುತ್ತಾರೆ ಚಂದ್ರಜಿತ್ ಬೆಳ್ಳಿಯಪ್ಪ.


ಒಂದು ಬರಹಕ್ಕೆ ಬೇಡಿಕೆ ಬರಬೇಕು. ಅದರಿಂದ ಸಂಪಾದಿಸಬೇಕೆಂದರೆ ಅದು ಹೇಗಿರಬೇಕು? ಎಂದು ಕೇಳಿದಕ್ಕೆ
ನಮ್ಮ ಬರಹವನ್ನು ಯಾರೋ ಬಳಸಿಕೊಳ್ಳಲು ಖರೀದಿಸಬೇಕು ಎಂದರೆ ಅದು ಹೀಗೇ ಇರಬೇಕು ಎಂದು ನಿಖರವಾಗಿ ಹೇಳೋದು ಕಷ್ಟ. ಆದರೆ ಒಂದಂತೂ ನಿಜ ‘ಬರೆಯುವ ಮೊದಲು ನಾವು ಯಾರಿಗೆ ಬರೆಯುತ್ತಿದ್ದೇವೆ? ನಮ್ಮ Target Audience ಯಾರು? ಪ್ರೇಕ್ಷಕರು ಯಾವ ವಯೋಮಾನದವರು? ನಾವು ಯಾವ ಉದ್ದೇಶದಿಂದ ಬರೆಯುತ್ತಿದ್ದೇವೆ? ಎಂಬುದು ಲೇಖನಿಬಕೈಯಲ್ಲಿ ಹಿಡಿವಾಗ ನೆನಪಿಟ್ಟುಕೊಳ್ಳಬೇಕಾಗುತ್ತದೆ‌.


ಸಿನಿಮಾ ರಂಗದಲ್ಲಿ ಬರಹಗಾರರಿಗೆ ಬೇಡಿಕೆ ಇದೆಯಾ? ಎಂಬ ಪ್ರಶ್ನೆಗೆ
ನಿಜಕ್ಕೂ ಇದೆ‌. ಇತ್ತೀಚೆಗೆ ಸ್ಯಾಂಡಲ್ ವುಡ್ ಅಲ್ಲಿ ಕೂಡ ಸಿನಿಮಾದ ಕಥಾ ವಸ್ತುವಿಗೆ ಪ್ರಾಮುಖ್ಯತೆ ಬರುತ್ತಿದೆ. 4-5 ವರ್ಷಗಳಲ್ಲಿ ಕನ್ನಡ ಸಿನಿಮಾ ರಂಗದಲ್ಲೂ ಅತ್ಯಂತ ವಿಭಿನ್ನ ಚಿತ್ರಗಳಿಗೆ ಮನ್ನಣೆ ಸಿಗಲಿದೆ. ರಕ್ಷಿತ್ ಶೆಟ್ಟಿ ಅವರ ತಂಡದಲ್ಲಿ ಬರಹಕ್ಕೆಂದು ತಂಡವೇ ಇದೆ. ಮುಂದೆ ರಕ್ಷಿತ್ ಶೆಟ್ಟಿ ಅವರಿಗೆ “Writers Factory” ಎಂಬ ಬರಹಗಾರರ ತಂಡವನ್ನು ದೊಡ್ಡದಾಗಿ ಕಟ್ಟಲಿದ್ದಾರೆ.

ಬರಹದ ಶಕ್ತಿಯಿಂದ ಸಿನಿರಂಗದಲ್ಲಿ ಹೆಸರು ಗಳಿಸುತ್ತಿರುವ ಚಂದ್ರಜಿತ್ ಬೆಳ್ಳಿಯಪ್ಪ ಅವರಿಗೆ ಕೊಡಗಿನಲ್ಲಿ ಅರೆಭಾಷೆ ಸಿನಿಮಾ ಉದ್ಯಮವೊಂದನ್ನು ಕಟ್ಟಬೇಕೆಂಬ ಮಹದಾಸೆ ಇದೆ. ಮುಂದೆ ಸ್ವತಂತ್ರ ನಿರ್ದೇಶಕರಾಗಿ ಸ್ಯಾಂಡಲ್ ವುಡ್ ಅಲ್ಲಿ ಮಹತ್ತರ ಸಾಧನೆಗಳನ್ನು ಮಾಡಲಿ ಎಂದು ಸುದ್ದಿ ಸಂತೆ ಬಳಗ ಶುಭ ಕೋರುತ್ತದೆ.

error: Content is protected !!