fbpx

ಪ್ರವೀಣ್ ಹತ್ಯೆ ಪ್ರಕರಣ: ಎನ್ ಐ ಎ ತನಿಖೆಗೆ ಕೆಜೆಬಿ ಒತ್ತಾಯ

ಬೆಳ್ಳಾರೆಯಲ್ಲಿ ಹತ್ಯೆಗೀಡಾದ ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟಾರು ನಿವಾಸಕ್ಕೆ ಶಾಸಕ ಕೆ.ಜಿ ಬೋಪಯ್ಯ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ತಮ್ಮ ಕ್ಷೇತ್ರದ ಕೆಲವು ಮುಖಂಡರೊಂದಿಗೆ ತೆರಳಿದ ಅವರು ಘಟನಾ ಸ್ಥಳಕ್ಕೂ ಭೇಟಿ ನೀಡಿ ವೀಕ್ಷಣೆ ಮಾಡಿದರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಪ್ರವೀಣ್ ಒಬ್ಬ ಸಾಮಾನ್ಯ ಕಾರ್ಯಕರ್ತ ಮಾತ್ರವಲ್ಲ, ಪಕ್ಷದ ಬಲವಾಗಿದ್ದರು. ಇದೊಂದು ರಾಷ್ಟ್ರೀಯ ಮಟ್ಟದ ಅಪರಾಧವಾಗಿದೆಯಲ್ಲದೆ, ಪಕ್ಕದ ಕೇರಳದಿಂದ ಸಮಾಜ ಘಾತುಕ ಶಕ್ತಿಗಳು ಸುಲಭವಾಗಿ ರಾಜ್ಯಕ್ಕೆ ಪ್ರವೇಶಿಸುವ ಅವಕಾಶವಿದೆ. ಈ ಹಿನ್ನೆಲೆಯಲ್ಲಿ ಇದೊಂದು ಎರಡು ರಾಜ್ಯಗಳ ನಡುವೆ ನಡೆದ ಅಪರಾಧವಾಗಿದ್ದು ಎನ್ ಐ ಎ ತನಿಖೆಯಾಗಬೇಕಿದೆ ಎಂದು ಒತ್ತಾಯಿಸಿದರು.

error: Content is protected !!