fbpx

ಪ್ರವಾಹ ಭೀತಿಯತ್ತ ತಗ್ಗು ಪ್ರದೇಶಗಳು


ಕೊಡಗು(ಕುಶಾಲನಗರ): ಜಿಲ್ಲೆಯ ವಿವಿದೆಡೆ ಸುರಿಯುತ್ತಿರುವ ಧಾರಾಕರ ಮಳೆಗೆ ಕಾವೇರಿ ಮಾತೆ ಮುನಿಸಿಕೊಂಡಿದ್ದು ಪ್ರವಾಹ ಭೀತಿ ಎದುರಿಸುವ ಲಕ್ಷಣ ದಟ್ಟವಾಗಿದೆ. ಅತ್ತ ಭಾಗಮಂಡಲ ತ್ರಿವೇಣಿ ಸಂಗಮ ಜಲಾವೃತಗೊಂಡು ಜಿಲ್ಲಾಕೇಂದ್ರ ಮಡಿಕೇರಿ ಕಡೆಗೆ ಸಂಪರ್ಕ,ನಾಪೋಕ್ಲು ಕಡೆ ಸಂಪರ್ಕ ಕಡಿತಗೊಂಡರೆ ನಾಪೋಕ್ಲು,ಭೇತ್ರಿ,ಕರಡಿಗೋಡು,ದುಬಾರೆ ಮುಗಿಸಿ ತಗ್ಗು ಪ್ರದೇಶವಾದ ಕುಶಾಲನಗರ ಪಟ್ಟಣ ಪ್ರವೇಶಿಸುತ್ತಿದ್ದಂತೆ ಪ್ರವಾಹ ಭೀತಿ ಶುರುವಾಗಿದೆ. ತೆಪ್ಪದ ಕಂಡಿಯಿಂದ ಕಣಿವೆ ವರೆಗೂ ಈ ಆತಂಕ ಇದ್ದು.. ಹಾರಂಗಿ ಜಲಾಶಯದಿಂದ ಹೆಚ್ಚುವರಿ ನೀರು ಬಿಟ್ಟರೆ ಮತ್ತೆ ಕಣಿವೆ ಭಾಗದಿಂದ ವಾಪಸ್ ಬರುವ ಎಲ್ಲಾ ಲಕ್ಷಣ ಇದ್ದು ಬಡಾವಣೆಗಳಿಗೆ ನುಗ್ಗುವ ಭೀತಿ ಇದೆ.

error: Content is protected !!