ಪ್ರವಾಸಿ ವಾಹನ ಪಲ್ಟಿ:ಪ್ರಯಾಣಿಕರು ಪಾರು

ಕೊಡಗು: ತಮಿಳುನಾಡಿನಿಂದ ಕೊಡಗು ಪ್ರವಾಸ ಆಗಮಿಸಿದ್ದ ವಾಹನವೊಂದು ಚಾಲಕನ ನಿಯಂತ್ರಣ ತಪ್ಪಿ ಮಡಿಕೇರಿ ಹೊರವಲಯದ ಸಿಂಕೋನ ಇಳಿಜಾರಿನಲ್ಲಿ ಮಗುಚಿ ಬಿದ್ದ ಘಟನೆ ನಡೆದಿದೆ.ಟೆಂಪೋ ಮಾದರಿಯ ವಾಹನ ಇದಾಗಿದ್ದು,ವಾಹನದಲ್ಲಿ ಹೆಂಗಸರು ಮಕ್ಕಳು ಇದ್ದು ಸಣ್ಣ ಪುಟ್ಟ ಗಾಯಗಳಿಂದ ಪ್ರಾಣಾಪಾಯದಿಂದ ಪಾರಾಗಿದ್ದು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಪ್ರಾಥಮಿಕ ವರದಿಯಿಂದ ತಿಳಿದು ಬಂದಿದೆ.