fbpx

ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತಿದೆ ಮಲ್ಲಳ್ಳಿ ಜಲಪಾತ

ಕೊಡಗು ಜಿಲ್ಲೆಯಲ್ಲಿ ಮಳೆಗಾಲ ಶುರುವಾದರೆ ಎಲ್ಲೆಂದರಲ್ಲಿ ಜಲಪಾತಗಳು ಹಾಲ್ನೊರೆ ಸೂಸುತ್ತಾ ಧುಮುಕುವ ದೃಶ್ಯ ಸಾಮಾನ್ಯವಾಗಿರುತ್ತದೆ. ಅದರಲ್ಲೂ ಸೋಮವಾರಪೇಟೆ ತಾಲ್ಲೂಕಿನ ಮಲ್ಲಳ್ಳಿ ಜಲಪಾತ ಪ್ರವಾಸಿಗರನ್ನು ತನ್ನತ್ತ ಕೈ ಬೀಸಿ ಕರೆಯುತ್ತಿದೆ.

ಸೋಮವಾರಪೇಟೆಯ ಶಾಂತಳ್ಳಿ ಹೋಬಳಿಯ ಬೀದಳ್ಳಿ ಯ ಸಮೀಪದ ಮಲ್ಲಳ್ಳಿ ಜಲಪಾತ ಕುಮಾರಧಾರ ನದಿಯಿಂದ ಉಂಟಾಗುವ ಜಲಪಾತವಾಗಿದೆ, ಹಾಸನದಲ್ಲಿ ಹುಟ್ಟಿ, ಕೊಡಗಿನ ಸೋಮವಾರಪೇಟೆ ಮೂಲಕ ದಕ್ಷಿಣಕನ್ನಡ ಪವಿತ್ರ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ ದೇವಾಲಯದಲ್ಲಿ ಭಕ್ತರ ಪುಣ್ಯ ಸ್ನಾನದ ವರೆಗೂ ಹರೆಯುವ ಈ ನದಿಯ ಮನಮೋಹಕ ದೃಶ್ಯ ನೋಡಲು ಮಲ್ಲಳ್ಳಿ ಹೇಳಿ ಮಾಡಿಸಿದಂತಹಾ ಸ್ಥಳ.

ಆದರೆ ಇದು ಅಪಾಯದ ಕೇಂದ್ರ ಬಿಂದು ಸಹ ಹೌದು,ಇಲ್ಲಿಗೆ ಸೆಕ್ಯುರಿಟಿ ಗಾರ್ಡ್ ಗಳಿದ್ದರೂ ಅವರ ಕಣ್ತಪ್ಪಿಸಿ ಜಲಪಾತದ ಸಮೀಪ ಹೋಗಿ ಮೋಜು ಮಸ್ತಿಯಲ್ಲಿ ತೋಡಗುತ್ತಿದ್ದಾರೆ. ಸೆಲ್ಪಿ ಹುಚ್ಚು ಯುವ ಸಮೂಹದ ಇಷ್ಟೆಲ್ಲಾ ಹುಚ್ಚಾಟಕ್ಕೆ ಕಾರಣವಾಗಿದೆ.

error: Content is protected !!