fbpx

ಪ್ರವಾಸಕ್ಕೆಂದು ಬಂದ ಮೂವರು ಮೃತ

ಕೊಡಗಿನಲ್ಲಿ ಮತ್ತೊಂದು ಜಲ ದುರಂತ ಸಂಭವಿಸಿದೆ.ಸೋಮವಾರಪೇಟೆ ತಾಲ್ಲೂಕಿನ
ಕೋಟೆ ಅಬ್ಬಿ ಜಲಪಾತದಲ್ಲಿ ಮೂವರು ಮೃತಪಟ್ಟಿದ್ದಾರೆ. ಮುಕ್ಕೋಡ್ಲುವಿನ ಈ ಜಲಪಾತದಲ್ಲಿ ಈ ದುರ್ಘಟನೆ ನಡೆದಿದ್ದು ಮೃತರು ತೆಲಂಗಾಣ ಮೂಲದವರು ಎನ್ನಲಾಗಿದೆ. ಎರಡು ದಿನದ ಪ್ರವಾಸಕ್ಕೆಂದು ಆಗಮಿಸಿದ್ದ ತಂಡ ಜಲಪಾತದ ನೀರಿನಲ್ಲಿ ಆಟವಾಡುತ್ತಿದ್ದಾಗ ಈ ಘಟನೆ ಜರುಗಿದ್ದು ಸರಣಿ ಸಾವಿಗೆ ಮುಕ್ಕೋಡ್ಲು ಅಬ್ಬಿ ಜಲಪಾತ ಸಾಕ್ಷಿಯಾಗಿದೆ.

ಮೃತರನ್ನು ಶ್ಯಾಮ್ 36,ಶಾಹಿಂದ್ರ 16 ಮತ್ತು ಶ್ರೀ ಹರ್ಷ 18 ಎಂದು ಗುರುತಿಸಲಾಗಿದ್ದು ಮೃತದೇಹವನ್ನು ಮೇಲಕ್ಕೆ ತರಲಾಗಿದೆ. ಸುಮಾರು 15 ಮಂದಿಯ ತಂಡ ಕುಶಾಲನಗರದ ಹೋಮ್ ಸ್ಟೇ ನಲ್ಲಿ ತಂಗಿದ್ದು ಬಳಿಕ ನಿರ್ಜನ ಕೋಟೆ ಅಬ್ಬಿ ಸ್ಥಳಕ್ಕೆ ತೆರಳಿದ್ದರು ಎನ್ನಲಾಗಿದೆ.

error: Content is protected !!